ನವದೆಹಲಿ: ದೇಶದ್ರೋಹ ಕಾಯ್ದೆಯ ಅರ್ಜಿ ವಿಚಾರಣೆ ನಡೆದಿದ್ದು, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಭಾರತದ ಮುಖ್ಯ ನ್ಯಾಯಾಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸೂರ್ಯಕಾಂತ್ ಪೀಠವೂ ಈ ಪ್ರಶ್ನೆ ಮಾಡಿದೆ. ಕೋರ್ಟ್ ನ ಪ್ರಶ್ನೆಗೆ ಉತ್ತರ ನೀಡಲು ಕೇಂದ್ರ ಸರ್ಕಾರ ಇನ್ನೊಂದು ವಾರಗಳ ಕಾಲಾವಕಾಶ ಪಡೆದುಕೊಂಡಿದೆ.
ಈ ಹಿಂದೆಯೆ ಈ ಕಾಯ್ದೆ ಬಗ್ಗೆ ಕೋರ್ಟ್ ಹೇಳಿತ್ತು. ಸೆಕ್ಷನ್ 124ಎ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕಲು ಬ್ರಿಟಿಷರಿಂದ ಬಳಸಲ್ಪಟ್ಟ ಒಂದು ನಿಬಂಧನೆಯಾಗಿದೆ. ಆದರೆ ಈಗ ದೇಶದ್ರೋಹ ಕಾಯ್ದೆ ದುರ್ಬಳಕೆಯಾಗುತ್ತಿದೆ. ಇದೊಂದು ಬ್ರಿಟಿಷರ ಕಾಲದ ಕಾನೂನು. ಸ್ವಾತಂತ್ರ್ಯ ಲಭಿಸಿ 75 ವರ್ಷವಾದರೂ ಈ ಕಾನೂನಿನ ಅಗತ್ಯವಿದೆಯಾ ಎಂದು ಪ್ರಶ್ನಿಸಿದೆ. ದೇಶದ್ರೋಹ ಕಾನೂನಿನಡಿ ಮಹಾತ್ಮಗಾಂಧೀಜಿ, ಬಾಲಗಂಗಾಧರ ತಿಲಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದು ಬ್ರಿಟಿಷರ ಕಾಲದ ಕಾನೂನು ಎಂದಿದೆ.
ಕರ್ನಾಟಕ ಮೂಲದ ಎಸ್ ಜಿ ಒಂಭತ್ತಕೆರೆ ಎಂಬುವವರು ಈ ಕುರಿತು ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿತ್ತು. ಇದೀಗ ಮತ್ತೆ ವಿಚಾರಣೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ಕಾಲಾವಾಕಾಶಕ್ಕೆ ಮನವಿ ಮಾಡಿದೆ.