ರಾಮನಗರ: ಕಾರು ಪಂಕ್ಚರ್ ಆಗಿ ಪಲ್ಟಿ ಹೊಡೆದ ಘಟನೆ ಜಿಲ್ಲೆಯಲ್ಲಿ ನಡೆದದೆ. ಕಾರಿನಲ್ಲಿದ್ದವರೆಲ್ಲಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದವರುವ ಬೆಂಗಳೂರಿನ ಉನ್ನಿಕೃಷ್ಣ ಎಂಬುವವರಿಗೆ ಸೇರಿದ ಕಾರು ಎನ್ನಲಾಗಿದೆ. ಈ ಕಾರಿನಲ್ಲಿ ನಾಲ್ಕು ಜನ ಜರ್ನಿ ಮಾಡುತ್ತಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಮುದುಗೆರೆ ಬಳಿ ಬರುತ್ತಿದ್ದಂತೆ ಟೈಯರ್ ಪಂಕ್ಚರ್ ಆಗಿ ಪಲ್ಟಿಯಾಗಿದೆ.
ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದ ಬಳಿ ಹೋಟೆಲ್ನಲ್ಲಿ ಊಟ ಮಾಡುತ್ತಿದ್ದ ಸಂಸದ ಪ್ರತಾಪ್ ಸಿಂಹ ಅಪಘಾತವಾದ ಕೂಡಲೇ ನೆರವಿಗೆ ಧಾವಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.