ಬೆಂಗಳೂರು: ಬಿಟ್ ಕಾಯಿನ್ ಕೇಸ್ ರಾಜ್ಯದಲ್ಲಿ ಇದೀಗ ಸ್ವಲ್ಪ ತಣ್ಣಗಾಗಿದೆ. ಆದ್ರೆ ಕೇಸ್ ಬಯಲಾದ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೇ ಕೇಸ್ ಗೆ ಸಂಬಂಧ ಪಟ್ಟಂತೆ, ಪ್ರಜ್ವಲ್ ರೇವಣ್ಣನ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಿದೆ.
ಹಣಕಾಸು ರಾಜ್ಯ ಸಚಿವ ಪಂಕಜ್ ಛದರಿ ಲಿಖಿತ ರೂಪದಲ್ಲಿ ಉತ್ತರಿಸಿದ್ದು, ಬಿಟ್ ಕಾಯಿನ್ ಕೇಸ್ ಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಬಂದು ರಾಜ್ಯ ಸರ್ಕಾರಕ್ಕೆ ಸಂಬಂಧ ಪಟ್ಟದ್ದಾಗಿದೆ. ಹೀಗಾಗಿ ಇಂಥಹ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವೇ ತನಿಖೆ ನಡೆಸಬೇಕಾಗುತ್ತದೆ. ಬೆಂಗಳೂರು ವಿಭಾಗದ ಇ.ಡಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಮಾಹಿತಿಯನ್ನು ಬಹಿರಂಗ ಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಒಳ್ಳೆಯದ್ದಲ್ಲ ಎಂದು ಲಿಖಿತ ಉತ್ತರ ನೀಡಿದ್ದಾರೆ.
ಇನ್ನು ಬಿಟ್ ಕಾಯಿನ್ ಕೇಸ್ ಗೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಬಿಟ್ಕಾಯಿನ್ ಹಗರಣ ಬಗ್ಗಡ ಕೇಂದ್ರ ಸರ್ಕಾರಕ್ಕೆ ಮಾಹಿತಿ ಇದೆಯಾ..?ಎಷ್ಡು ಕೋಟಿ ಹಗರಣ ಆಗಿದೆ.? ಇ.ಡಿ, ಸಿಬಿಐ, ಕೇಂದ್ರ ವಿಶೇಷಾ ತನಿಖಾ ದಳಕ್ಕೆ ತನಿಖೆಗೆ ಒಪ್ಪಿಸಲಾಗಿದೆಯಾ ಎಂಬ ಇತ್ಯಾದಿ ಪ್ರಶ್ನೆಗಳ ಕೇಳಿ ಪತ್ರ ಬರೆದಿದ್ದರು.