ಅಡುಗೆ ಮನೆ ಪದಾರ್ಥವೇ ನಮ್ಮ ದೇಹಕ್ಕೆ ಔಷಧಿ, ಮದ್ದು. ಅದರಲ್ಲಿ ಹೆಸರು ಬೇಳೆ ಕೂಡ ಒಂದು. ಯಾವಾಗಲಾದರೊಮ್ಮೆ ಕೋಸಂಬರಿ ಮಾಡಿಕೊಂಡು ತಿನ್ನುವ ಈ ಬೇಳೆಯಲ್ಲಿ ಅನೇಕ ಉಪಯೋಗಗಳಿವೆ.
ಅತೀ ಉಷ್ಣ ವಾಗಿದ್ದರೆ, ಉಷ್ಣದಿಂದ ಬಾಯಿ ಹುಣ್ಣಾಗಿದ್ದರೆ ಹೆಸರುಬೇಳೆ ಪಾಯಸ ಮಾಡಿ ತಿಂದರೆ ಉಷ್ಣ ಕಮ್ಮಿಯಾಗುತ್ತದೆ.
ವಾರಕ್ಕೆ ಒಮ್ಮೆಯಾದರೂ ಹೆಸರುಬೇಳೆಯನ್ನು ಹೆಚ್ಚು ಉಪಯೋಗಿಸುವುದು ಒಳ್ಳೆಯದು. ಹೆಸರುಬೇಳೆ ಜೊತೆಗೆ ಸ್ವಲ್ಪ ಮೆಂತ್ಯ, ಸ್ವಲ್ಪ ನೆಲ್ಲಿ ಚೆಟ್ಟು ಹಾಕಿ ರಾತ್ರಿ ನೆನೆಸಿ, ಬೆಳಗ್ಗೆ ನುಣುಪಾಗಿ ಅರೆದು ತಲೆಗೆ ಹಚ್ಚಿ ಸ್ನಾನ ಮಾಡಿದರೂ ಕೂಡ ತಂಪಾಗುತ್ತದೆ.
ಹೆಸರುಬೇಳೆ ಮತ್ತು ಕಡಲೆ ಬೇಳೆಯನ್ನು ಪುಡಿ ಮಾಡಿಸಿ, ಆ ಹಿಟ್ಟಿನಿಂದ ಮಕ್ಕಳಿಗೆ ಸ್ನಾನ ಮಾಡಿಸಿದರೆ, ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದನ್ನು ತಪ್ಪಿಸಬಹುದು. ಅದಕ್ಕೆ ಸ್ವಲ್ಪ ಮೆಂತ್ಯವನ್ನು ಕೂಡ ಪುಡಿ ಮಾಡಿಸಬಹುದು.