Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಯುವ ಜನತೆ ದಾರಿ ತಪ್ಪುತ್ತಿದೆ : ಹುರಳಿ ಬಸವರಾಜು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
                       ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 12 :  ನಮ್ಮ ಹಿಂದೆ ನಡೆಯುವ ಟೀಕೆ, ಟಿಪ್ಪಣ್ಣಿಗಳಿಗೆ ಗಮನವನ್ನು ನೀಡದೆ ಬದುಕಿನ ಗುರಿಯನ್ನು ಮುಟ್ಟುವ ಕಾರ್ಯವನ್ನು ಮಾಡಬೇಕಿದೆ ಎಂದು ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಬಸವರಾಜು ಮಕ್ಕಳಿಗೆ ಕರೆ ನೀಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಗರದ ರಾ.ಹೆ.13ರಲ್ಲಿನ ವಿದ್ಯಾ ಭಾರತಿ ಜ್ಞಾನ ಮಂದಿರ ಇವರ ಸಂಯುಕ್ತಾಶಯದಲ್ಲಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ  ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನವರಿಯಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ ಇದರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯೂ ಸಹಾ ಸೇರಿದೆ. ಇದು ನಮಗೆಲ್ಲಾ ಹಬ್ಬದ ದಿನ ಇದ್ದಂತೆ, ಸ್ವಾಮಿ ವಿವೇಕಾನಂದರ ವಾಣಿಯಂತೆ ಏಳಿ ಏದ್ದೆಳಿ ಗುರಿ ಮುಟ್ಟವ ತನಕ ನಿಲ್ಲದಿರಿ ಎಂಬಂತೆ ಯುವ ಜನತೆ ಹೋರಾಟವನ್ನು ಮಾಡಬೇಕಿದೆ. ನಮ್ಮ ದೇಶ ಈಗ ಯುವಜನತೆಯ ಕೈಯಲ್ಲಿ ಇದೆ ಅವರು ಇದನ್ನು ಮುನ್ನೆಡಸಬೇಕಿದೆ ಎಂದರು.

ಇಂದಿನ  ಯುವ ಜನತೆ ಹಿರಿಯ ಮಾತನ್ನು ಕಡೆಗಣಿಸುತ್ತಿದ್ದಾರೆ. ಅವರ ಮಾತು ಎಂದರೆ ನಿರ್ಲಕ್ಷ ಮಾಡುತ್ತಿದ್ದಾರೆ. ಹಿರಿಯರ ಅನುಭವನ್ನು ಕಡೆಗಣಿಸುತ್ತಿದ್ದಾರೆ. ಇಂದಿನ ದಿನಮಾನದಲ್ಲಿ ಆಧುನಿಕ ತಂತ್ರಜ್ಞಾನದಿಂದಾಗಿ ನಮ್ಮ ಯುವ ಜನತೆ ದಾರಿಯನ್ನು ತಪ್ಪುತ್ತಿದೆ ಎಂಬ ಭಾವನೆ ಮೂಡುತ್ತಿದೆ. ಯುವ ಜನತೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧನೆ ಮಾಡುತ್ತಾರೆ. ಅದರೆ ಯುವ ಜನತೆ ಏನು ಮಾಡಿದರು ಸಹಾ ತಪ್ಪನ್ನು ಕಂಡು ಹಿಡಿಯುತ್ತಾರೆ, ಈ ಹಿನ್ನಲೆಯಲ್ಲಿ ನಮ್ಮ ಹಿಂದೆ ಟೀಕೆ, ಟಿಪ್ಪಣಿಯನ್ನು ಮಾಡುವವರ ಬಗ್ಗೆ ಗಮನವನ್ನು ನೀಡದೇ ಬದುಕಿನ ಗುರಿಯನ್ನು ಮುಟ್ಟಿವಂತ ತಮ್ಮ ಗಮನ ನೀಡಬೇಕಿದ ಸ್ವಾಮಿ ವಿವೇಕಾನಂದರೂ ಸಹಾ ಇದ್ದನ್ನೇ ಹೇಳಿದ್ದಾರೆ ಅವರಂತೆ ನಡೆಯಬೇಕಿದೆ ಎಂದು ಹುರಳಿ ಬಸವರಾಜು ತಿಳಿಸಿದರು.

ವಿವೇಕಾನಂದರು ಬಾಲ್ಯದಲ್ಲಿಯೇ ಉತ್ತಮ ಜ್ಞಾನವನ್ನು ಸಂಪಾದಿಸುವುದರ ಮೂಲಕ ತಮ್ಮ ಮುಂದಿನ ಗುರಿಯನ್ನು ತೋರಿಸಿದ್ದರು, ಬೇರೆಯವರು ಹೇಳಿದ್ದನ್ನು ಒಪ್ಪಿಕೊಳ್ಳದೇ ಅದನ್ನು ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಂಡಿದ್ದರು, ಇದು ಅವರನ್ನು ದೊಡ್ಡ ಮನ್ಯುಷ್ಯರನ್ನಾಗಿ ಮಾಡಿತು. ಬಾಲ್ಯದಲ್ಲಿಯೇ ಭಗವಂತನ ಬಗ್ಗೆ ಪ್ರಶ್ನಿಸಿದ್ದರು. ನಂತರ ರಾಮಕೃಷ್ಣ ಪರಹಂಸರಿಂದ ಇದಕ್ಕೆ ಉತ್ತರವನ್ನು ಪಡೆದುಕೊಂಡರು ಎಂದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‍ನ ಜಿಲ್ಲಾಧ್ಯಕ್ಷರಾದ ನಾಗರಾಜ್ ಸಂಗಂ ಮಾತನಾಡಿ, ಇಂದಿನ ಯುವ ಪೀಳೀಗೆ ದೇಶವನ್ನು ಕಟ್ಟುವ ಕೆಲಸವನ್ನು ಮಾಡಬೇಕಿದೆ. ವಿಶ್ವಕ್ಕೆ ವಿವೇಕಾನಂದರ ಮಾದರಿಯಾಗಿದ್ದಾರೆ. ನಮ್ಮ ಪರಿಷತ್ ವತಿಯಿಂದ ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿಯೂ ಸಹಾ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರು ಸಹಾ ವಿವೇಕಾನಂದರಂತೆ ಆಗಬೇಕಿದೆ. ಇದರಿಂದ ದೇಶ ಪ್ರಗತಿಯನ್ನು ಕಾಣಲಿದೆ. ನಾವುಗಳು ಆಶಾದಾಯಕರಾಗಿರಬೇಕೇ ಹೊರೆತು  ನಿರಾಶದಾಯಕರಾಗಬಾರದೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಭಾರತಿ ಜ್ಞಾನ ಮಂದಿರದ ಮುಖೋಪಾಧ್ಯಾಯರಾದ ಶ್ರೀಮತಿ  ಹಸೀನ ವಹಿಸಿದ್ದರು. ಶಂಕರಪ್ಪ, ಕಿರಣ ಶಂಕರ್, ರಂಗಪ್ಪ, ಕೆಂಚಪ್ಪ, ಜ್ಞಾನ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!