ಶೃತಿ ಹರಿಹರನ್ ಎಂದಾಕ್ಷಣಾ ನೆನಪಾಗುವುದು ಮೀಟೂ ಕೇಸ್ . ಈ ಕೇಸ್ ವಿಚಾರಕ್ಕೆ ಹೆಚ್ಚು ಸುದ್ದಿ ಮಾಡಿದ್ದರು. ಬಳಿಕ ಚಿತ್ರರಂಗದಿಂದಾನೇ ದೂರವಾಗಿದ್ದರು.ಮಗು ಆದ ಮೇಲೆ ಮತ್ತೆ ಸಿನಿಮಾದಲ್ಲಿಆಕ್ಟೀವ್ ಆಗಿದ್ದಾರೆ. ಆದರೆ ಮತ್ತೆ ಮೀಟೂ ಕೇಸ್ ನಿಂದ ಸುದ್ದಿಯಾಗಿದ್ದಾರೆ.
ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಮೀಟೂ ಕೇಸ್ ಹಾಕಿದ್ದರು. ಆದರೆ ಅದಕ್ಕೆ ಸರಿಯಾದ ಸಾಕ್ಷ್ಯಾಧಾರ ಇಲ್ಲದ ಕಾರಣ ಬಿ ರಿಪೋರ್ಟ್ ಸಲ್ಲಿಕೆಯಾಗಿತ್ತು. ಅರ್ಜುನ್ ಸರ್ಜಾ ಅವರನ್ನು ನಿರಪರಾಧಿ ಎಂದು ತೀರ್ಪು ಬಂದಿತ್ತು. ಇದೀಗ ನಟಿ ಶೃತಿ ಹರಿಹರನ್ ಗೆ ಕೋರ್ಟ್ ನೋಟೀಸ್ ನೀಡಿದೆ. ಬಿ ರಿಪೋರ್ಟ್ ಸಲ್ಲಿಕೆಯನ್ನು ಪ್ರಶ್ನಿಸಿ ಶೃತಿ ಹರಿಹರನ್ ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜುನ್ ಸರ್ಜಾ ವಿರುದ್ಧ ಮಾಡಲಾದ ಆರೋಪಕ್ಕೆ ನಿಖರವಾದ ದಾಖಲೆಗಳನ್ನು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ನಟಿಗೆ ನೋಟೀಸ್ ನೀಡಿದೆ.
2017ರಲ್ಲಿ ನಡೆದ ಕೇಸು ಇದಾಗಿದೆ. ಸಿನಿಮಾ ಶೂಟಿಂಗ್ ವೇಳೆ ನಟ ಅರ್ಜುನ್ ಸರ್ಜಾ ಅವರು ಕಿರುಕುಳ ನೀಡಿದ್ದರು ಎಂದು ನಟಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸ್ ವಿಚಾರಣೆ ವೇಳೆ ಸರಿಯಾದ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲದ ಕಾರಣ ಅಂದು ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು.