ಹುಬ್ಬಳ್ಳಿ: ಡಾಕ್ಟರ್ ಆಗಲಿ, ಮೆಡಿಕಲ್ ನವರಾಗಲಿ ಕೊಂಚ ಎಚ್ಚರ ತಪ್ಪಿದರೆ ಅದರಿಂದಾಗುವ ಅಪಾಯ ಅಷ್ಟಿಷ್ಟಲ್ಲ. ಅದು ಪ್ರಾಣಕ್ಕೂ ಕುತ್ತು ಬರುತ್ತದೆ. ಇದೀಗ ಅದಲು ಬದಲು ಮಾತ್ರೆಯಿಂದ ವ್ಯಕ್ತಿಯೊಬ್ಬನ ಪ್ರಾಣ ಹೋಗಿರುವ ಆರೋಪ ಮೆಡಿಕಲ್ ಮೇಲೆ ಬಂದಿದೆ.
ಧಾರಾವಾಡದ ಡಾ. ಒಅಂಡುರಂಗು ಬಳಿಗೆ ಕಾರವಾರದ ಅಜ್ಜುಹಳ್ಳಿಯ ಹನುಮಂತಪ್ಪ ಪಾಟೀಲ್ ಎಂಬುವವರನ್ನು ಕರೆದುಕೊಂಡು ಹೋಗಲಾಗಿತ್ತಂತೆ. ಖಿನ್ನತೆಗೆ ಒಳಗಾಗಿದ್ದ ಹನುಮಂತಪ್ಪ ಅವರಿಗೆ ಡಿಪ್ರೆಶನ್ ಮಾತ್ರೆಯನ್ನು ವೈದ್ಯರು ಬರೆದುಕೊಟ್ಟಿದ್ದರಂತೆ. ಹನುಮಂತಪ್ಪ ಪುತ್ರ ಪ್ರವೀಣ್ ಅಲ್ಲೆ ಇದ್ದ ಮೆಡಿಕಲ್ ಶಾಪ್ ಗೆ ಹೋಗಿ ಮಾತ್ರೆ ಕೇಳಿದಾಗ ಈ ಕಂಪನಿಯದ್ದಿಲ್ಲ, ಬೇರೆ ಕಂಪನಿಯದ್ದು ಕೊಡಲಾ ಎಂದಿದ್ದಾರೆ.
ಮಗ ಕೂಡ ಮೆಡಿಕಲ್ ನವರು ಹೇಳಿದಂತೆ ಆ ಮಾತ್ರೆಗಳನ್ನೇ ತೆಗೆದುಕೊಂಡು ಹೋಗಿದ್ದಾರೆ. 12 ದಿನ ಅದೇ ಮಾತ್ರೆಗಳನ್ನು ನೀಡಿದ್ದಾರೆ. ಆದರೆ ದಿನನ ಕಳೆದಂತೆ ಅನಾರೋಗ್ಯ ಹೆಚ್ಚಾಗಿದೆ. ಬಳಿಕ ಆಸ್ಪತ್ರೆಗೆ ಅದೇ ವೈದ್ಯರ ಬಳಿ ಕರೆದುಕೊಂಡು ಹೋದಾಗ ಡಿಪ್ರೆಶನ್ ಮಾತ್ರೆ ಬದಲು, ಕ್ಯಾನ್ಸರ್ ಮಾತ್ರೆ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ದೇಹದ ಒಳಗೆ ಸಂಪೂರ್ಣ ಹಾಳಾಗಿದ್ದ ಕಾರಣ ಹನುಮಂತಪ್ಪ ಮೃತಪಟ್ಟಿದ್ದಾರೆ. ಈ ಸಂಬಂಧ ಮೆಡಿಕಲ್ ಶಾಪ್ ವಿರುದ್ಧ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.