ಹಾಸನ: ಹಾವು ಅಂದ್ರೆ ಎಲ್ಲರಿಗೂ ಭಯ ಇದ್ದೆ ಇರುತ್ತೆ. ಅದ್ರಲ್ಲೂ ಕಾಳಿಂಗ ಸರ್ಪ ಅಂದ್ರೆ ಕೇಳ್ಬೇಕಾ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬರಡಿ ಗ್ರಾಮದಲ್ಲಿ 11 ಅಡಿ ಉದ್ದದ ಸರ್ಪ ಕಾಣಿಸಿಕೊಂಡಿದೆ. ಇದು ಕಾಳಿಂಗ ಸರ್ಪವೆಂದು ತಿಳಿದ ಮೇಲೆ ಗ್ರಾಮದ ಜನ ಆತಂಕಗೊಂಡಿದ್ದಾರೆ.
ಕಾಫಿ ತೋಟದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಅದು ನಿಂಗಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟ. ಅಲ್ಲೇ ಕೆಲಸ ಮಾಡುತ್ತಿದ್ದವರ ಕಣ್ಣಿಗೆ ಕಾಣಿಸಿಕೊಂಡಿದೆ. ಆದ್ರೆ ಜನರ ಸದ್ದು ಗದ್ದಲ ಕೇಳಿ ಕಾಳಿಂಹ ಸರ್ಪ ತಕ್ಷಣ ಭೂಮಿಯೊಳಕ್ಕೆ ಸೇರಿಕೊಂಡಿದೆ. ಇದನ್ನ ಗಮನಸಿದ ಜನ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಉರಗ ಪ್ರೇಮಿ ಸಗೀರ್ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾವು ಹಿಡಿದು ತೋರಿಸುವ ತನಕ ಅದು ಕಾಳಿಂಗ ಸರ್ಪ ಎಂಬುದು ಯಾರಿಗೂ ತಿಳಿದಿರಲಿಲ್ಲ. ಒಂದು ಪಕ್ಷ ತಿಳಿದಿದ್ದರೆ ಜನ ಅಲ್ಲಿ ಸಮಾಧಾನವಾಗಿ ಇರ್ತಾ ಇರ್ಲಿಲ್ಲ ಅನ್ನಿಸುತ್ತೆ. ಯಾವಾಗಾ ಅದು ಕಾಳಿಂಗ ಸರ್ಪ ಎಂಬುದು ತಿಳಿಯುತ್ತೆ ಜನ ಗಾಬರಿಗೊಂಡಿದ್ದಾರೆ. ಸದ್ಯ ಸಗೀರ್ ಕಾಳಿಂಗ ಸರ್ಪವನ್ನ ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.