ಬೆಳಗಾವಿ: ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಒ್ರಕಾಶ್ ಹುಕ್ಕೇರಿ ಹಣ ಹಂಚಿಕೆ ಮಾಡಿದ್ದಾರೆಂದು ಬಿಜೆಪಿ ಆರೋಪ ಮಾಡಿದೆ. ಈ ಆರೋಪಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದು, ಅಧಿಕಾರಕ್ಕೋಸ್ಕರ ಹಣ ಖರ್ಚು ಮಾಡುತ್ತಿರುವುದು ಅವರ ಪಕ್ಷದವರೇನೆ. ಅಧಿವೇಶನದಲ್ಲಿ ಹೇಳಿದ್ದು ಇದೆ. ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡಿದ್ದಂತ ಬಿಜೆಪಿಯವರು ಈ ರೀತಿ ಆರೋಪ ಮಾಡುವುದು ನನಗೆ ಬಾಲಿಸಾ ಎನಿಸಿದೆ ಎಂದಿದ್ದಾರೆ.
ಪ್ರಭಾಕರ್ ಕೋರೆ ಸರ್ ವಯಸ್ಸಲ್ಲಿ, ಅನುಭವದಲ್ಲಿ ನನಗಿಂತ ತುಂಬಾ ದೊಡ್ಡವರು. ಪ್ರಕಾಶ್ ಹುಕ್ಕೇರಿ ಅವರು ಎಸ್ಎಸ್ಎಲ್ಸಿ ಫೇಲ್ ಇದ್ದಾರೋ, ಪಾಸ್ ಇದ್ದಾರೋ ಅದಂತು ನನಗೆ ಗೊತ್ತಿಲ್ಲ. ಆದರೆ ಜನರ ಪರೀಕ್ಷೆಯಲ್ಲಿ, ರಾಜಕೀಯ ಪರೀಕ್ಷೆಯಲ್ಲಿ, ಚುನಾವಣಾ ಪರೀಕ್ಷೆಯಲ್ಲಿ ಎಂಟು ಬಾರಿ ಪಾಸಾಗಿ, ಜನರನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ ಅವರ ಮೇಲೆ ಆರೋಪ ಮಾಡಿದವರ ಬಗ್ಗೆ ಮಾತನಾಡಲ್ಲ. ಅವರು ಪಾಸಾಗಿದ್ದಾರೋ ಫೇಲಾಗಿದ್ದಾರೆ ಎಂಬುದಕ್ಕಿಂತ ಅವರು ಅನುಭವಸ್ಥರಿದ್ದಾರೆ.
ನಮ್ಮ ಸಮಾಜ ಕಂಡಂತ ಒಳ್ಳೆ ನಾಯಕರಿದ್ದಾರೆ. ಈ ರೀತಿ ಎಸ್ಎಸ್ಎಲ್ಸಿ ಫೇಲ್, ಪಾಸ್ ಅನ್ನೋದಕಿಂತ ಜನರ ಎದುಗಡೆ ಪಾಸಾಗಿ ಶಬ್ಬಾಶ್ ಎನಿಸಿಕೊಂಡಿದ್ದಾರೆ ಪ್ರಕಾಶ್ ಹುಕ್ಕೇರಿ ಎಂದು ಹೇಳುವುದಕ್ಕೆ ಬಯಸುತ್ತೇನೆ ಎಂದಿದ್ದಾರೆ.
82-83 ಯಡಿಯೂರಪ್ಪ ಸಾಹೇಬ್ರಿಗೆ. ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು, ಕಾರಜೋಳು ಅವರಿಗೆ 75 ವರ್ಷ. ಅವರು ಮುದಿ ಎತ್ತು ಅಂತ ನಾತಾಡುವುದು ಎಷ್ಟು ಸರಿ. ಶ್ರವಣ ಕುಮಾರ ಅವರ ಕಥೆಯನ್ನು ಓದಿ ನಾವೆಲ್ಕಾ ದೊಡ್ಡವರಾಗಿದ್ದೇವೆ. ಇವರು ಗೋ ಪೂಜೆ ಮಾಡುತ್ತಾರೆ, ಗೋ ಶಾಲೆ ಕಟ್ಟುತ್ತಾರೆ ವಯಸ್ಸಾದ ಹಸುಗಳನ್ನು ಇಡಲು. ಆದರೆ ಯಡಿಯೂರಪ್ಪ ಅವರ ಬಗ್ಗೆ ವಯಸ್ಸಾಗಿದೆ ಎಂದು ಮಾತನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.