ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇತ್ತಿಚೆಗೆ ಇಡಿ ನೋಟೀಸ್ ಜಾರಿ ಮಾಡಿತ್ತು. ಇಂದು ಡಿಕೆಶಿ ವಿಚಾರಣೆಗೆ ಹಾಜರಾಗಿದ್ದಾರೆ. ದೆಹಲಿಯ ವಿದ್ಯುತ್ ಲೇನ್ ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾತಣೆ ನಡೆಯುತ್ತಿದೆ.
ಅಕ್ರಮ ಹಣ ವರ್ಗಾವಣೆ ವಿಚಾರವಾಗಿ ಇಡಿ ಅಧಿಕಾರಿಗಳು ಡಿಕೆಶಿಗೆ ನೋಟೀಸ್ ನೀಡಿದ್ದರು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ವಿಚಾರಣೆ ಮುಗಿದ ಬಳಿಕ ಡಿಕೆಶಿ ರಿಯಾಕ್ಷನ್ ತಿಳಿಯ ಬಹುದು.
ನೋಟೀಸ್ ಜಾರಿ ಮಾಡಿದ ಮೇಲೆ ಡಿಕೆಶಿ ಕೂಡ ಬೇಸರ ವ್ಯಕ್ತಪಡಿಸಿದ್ದರು. ಸಂಸದ ಡಿಕೆ ಸುರೇಶ್ ಕೂಡ ಇದು ಟಾರ್ಗೆಟ್ ಮಾಡುತ್ತಿದ್ದಾರೆ ಎಂದಿದ್ದರು. ಇದು ಕಾಂಗ್ರೆಸ್ ಆಗಲಿ, ಡಿಕೆಶಿ ಆಗಲಿ ಇದರಿಂದ ಹೆದರುವುದಿಲ್ಲ ಎಂದಿದ್ದರು.