Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಂಫಿಲ್ ವಿದ್ಯಾರ್ಥಿನಿಯಿಂದ ವಿವಿ ಆವರಣದಲ್ಲಿ ಬಾಂಬ್ ಸ್ಪೋಟ : ಪತ್ನಿಯ ಕೃತ್ಯಕ್ಕೆ ಶಬ್ಬಾಶ್ ಎಂದ ಪತಿ..!

Facebook
Twitter
Telegram
WhatsApp

ಕರಾಚಿ : ಪಾಕಿಸ್ತಾನದಲ್ಲಿ ಮಹಿಳೆಯೊಬ್ಬಳು ಆತ್ನಹತ್ಯಾ ಬಾಂಬ್ ಸ್ಪೋಟಿಸಿಕೊಂಡು ಸಾವನ್ನಪ್ಪಿದ್ದಾಳೆ‌. ಆಕೆಯೊಂದಿಗೆ ಮೂವರು ಚೀನಾ ನಾಗರಿಕರು ಸೇರಿದಂತೆ ನಾಲ್ವರು ದುರಂತ ಅಂತ್ಯ ಕಂಡಿದ್ದಾರೆ. ಈ ಘಟನೆಯನ್ನು ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ ಮಹಿಳೆಯ ಪತಿ ಶ್ಲಾಘಿಸಿದ್ದಾರೆ. ಪತ್ನಿಯ ಕೃತ್ಯವನ್ನು ಮೆಚ್ಚಿಕೊಂಡಿದ್ದಾರೆ.

ಕರಾಚಿ ವಿಶ್ವವಿದ್ಯಾನಿಲಯದ ಚೀನಿ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ ಬಳಿ ಮಂಗಳವಾರ ಸ್ಪೋಟ ಸಂಭವಿಸಿತ್ತು. ಶಾರಿ ಬಲೋಚ್ ಎಂಬಾಕೆ ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ್ದಾಳೆ. ಆಕೆಯ ಗಂಡ ಹಬಿಟನ್ ಬಶೀರ್ ಅಜ್ಞಾತ ಸ್ಥಳದಿಂದ ಟ್ವೀಟ್ ಮಾಡಿದ್ದಾರೆ. ಪತ್ನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ನಿಸ್ವಾರ್ಥ ಕೃತ್ಯದ ಬಗ್ಗೆ ಹೇಳಲು ಮಾತುಗಳಿಲ್ಲ. ಅವಳು ಈ ಕೃತ್ಯ ಮಾಡಿದ್ದಾಳೆ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ. ಮಹ್ರೋಚ್ ಮತ್ತು ಮೀರ್ ಹಾಸನ್ ಎಂತಹ ಮಹಾನ್ ಮಹಿಳೆ ನೀನು ಎಂದು ಯೋಚಿಸುತ್ತಾ ಬಹಳ ಹೆಮ್ಮೆಯಿಂದ ಮನುಷ್ಯರಾಗಿ ಬೆಳೆಯುತ್ತಾರೆ. ನೀನು ನಮ್ಮ ಜೀವನದ ಪ್ರಮುಖ ಭಾಗವಾಗಿ ಉಳಿಯುತ್ತಿ ಎಂದು ಟ್ವೀಟ್ ಮಾಡಿದ್ದಾರೆಂದು ಅಫ್ಘಾನ್ ಪತ್ರಕರ್ತ ಟ್ವೀಟ್ ನಲ್ಲಿ ಮಾಹಿತಿ ತಿಳಿಸಿದ್ದಾರೆ.

ಇನ್ನು ಆತ್ಮಹತ್ಯಾ ಬಾಂಬ್ ಸ್ಪೋಟಿಸಿದ ಶಾರಿಗೆ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಬಶೀರ್ ದಂತ ವೈದ್ಯರಾಗಿದ್ದಾರೆ. ಜೊತೆಗೆ ಆಕೆಯ ತಂದೆ ಉಪನ್ಯಾಸಕರಾಗಿದ್ದಾರೆ. ಈ ಘಟನೆಯನ್ನು ಚೀನಾ ರಾಯಭಾರ ಕಚೇರಿ ಖಂಡಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

ರೋಟರಿ ಕ್ಲಬ್‍ನಿಂದ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳಿ : ರೊ.ಕನಕರಾಜ್

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ‌ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 19  : ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಕೊಡಬೇಕೆಂದು

error: Content is protected !!