ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಢ ಅವರ ಸೇವಾ ಅವಧಿ ಇಂದಿಗೆ ಮುಕ್ತಾಯವಾಗಿದೆ. ನವೆಂಬರ್ 10ರಂದು ನಿವೃತ್ತಿ ಹೊಂದಲಿದ್ದಾರೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಭಾವುಕ ವಿದಾಯ ಘೋಷಿಸಲಾಯ್ತು. ನಾಳೆ ಚಂದ್ರಚೂಢ ಅವರ ಕಚೇರಿಯಲ್ಲಿ ಬಿಳ್ಕೊಡುಗೆ ಸಮಾರಂಭ ಇಟ್ಟುಕೊಳ್ಳುವ ಸಾಧ್ಯತೆ ಇದೆ.
ನ್ಯಾಯಮೂರ್ತಿ ಚಂದ್ರಚೂಢ ಅವರು ನಿವೃತ್ತಿ ಹೊಂದಿದ್ದಕ್ಕೆ ಸಹೋದ್ಯೋಗಿಗಳು ಭಾವುಕರಾಗಿದ್ದರು. ಚಂದ್ರಚೂಢ ಅವರು ಈ ವೇಳೆ ಮಾತನಾಡಿ, ನಾನು ನನ್ನ ಆರಂಭಿಕ ದಿನಗಳಲ್ಲಿ ಯಾಂತ್ರಿಕನಂತೆ ನ್ಯಾಯಾಲಯಕ್ಕೆ ಬರುತ್ತಿದ್ದೆ. ನಾಳೆಯಿಂದ ಜನರಿಗೆ ನಾನು ನ್ಯಾಯ ಕೊಡಲು ಸಾಧ್ಯವಿಲ್ಲ. ಆದರೂ ಇಷ್ಟು ದಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ. ನನಗೆ ಖುಷಿ ಇದೆ, ನಾನು ಸಂತುಷ್ಟನಾಗಿದ್ದೇನೆ. ನನ್ನ ಸಹೋದ್ಯೋಗಿಗಳು ಬೀಳ್ಕೊಡುಗೆ ಕಾರ್ಯಕ್ರಮವನ್ನು ಯಾವಾಗ ಇಟ್ಟುಕೊಳ್ಳೋಣಾ ಎಂದು ಕೇಳಿದಾಗ ಮಧ್ಯಾಹ್ನ ಎರಡು ಗಂಟೆ ಎಂದಿದ್ದೇನೆ. ನಮ್ಮ ಉಳಿಕೆ ಕೆಲಸಗಳನ್ನು ಆ ಸಮಯಕ್ಕೇನೆ ಮಾಡಿಕೊಳ್ಳುವುದು. ನಿತ್ಯ ನ್ಯಾಯಲಯಕ್ಕೆ ಬರುವುದೆ ನಮ್ಮಿಂದ ಜನರಿಗೆ ಸರಿಯಾದ ಸೇವೆ ಹಾಗೂ ನ್ಯಾಯ ಸಿಗಲಿ ಎಂದು.
ಇಷ್ಟು ವರ್ಷದ ನನ್ನ ನ್ಯಾಯಾಂಗ ಸೇವೆಯಲ್ಲಿ ಯಾರಿಗಾದರೂ ನೋವಾಗಿದ್ದರೆ ನಾನು ಅವರಲ್ಲಿ ಕ್ಷಮೆ ಕೇಳುತ್ತೇನೆ. ಮಿಚ್ಚಾಮಿ ದುಃಖಧಾಮ್ ಎಂಬ ನುಡಿಗಟ್ಟು ಹೇಳಿ ನ್ಯಾಯಮೂರ್ತಿ ಚಂದ್ರಚೂಢ ಅವರು ತಮ್ಮ ಭಾವುಕ ನುಡಿಗಳನ್ನು ಮುಗಿಸಿದರು. ಮಿಚ್ಚಾಮಿ ದುಃಖಧಾಮ್ ಎಂಬುದು ಜೈನ ಸಮುದಾಯದ ಒಂದು ನುಡಿಗಟ್ಟು. ಈ ನುಡಿಗಟ್ಟಿನ ಅರ್ಥ ನನ್ನ ಎಲ್ಲಾ ಅಪರಾಧಗಳು ಕ್ಷಮಿಸಲ್ಪಡುತ್ತವೆ ಎಂದೇ ಆಗಿದೆ. ಈ ಮಾತು ಹೇಳಿ ಚಂದ್ರಚೂಢ ಅವರು ಕೋರ್ಟ್ ನಿಂದ ನಿರ್ಗಮಿಸಿದರು. ಎಲ್ಲರೂ ಗೌರವ ಪೂರ್ವಕ ಹಾಗೂ ಬೇಸರದಿಂದಾನೇ ಕಳುಹಿಸಿಕೊಟ್ಟರು.