ಚಿತ್ರದುರ್ಗ, (ಫೆ.07) : ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ನಡೆದ ಜೆಇಇ ಮೈನ್ಸ್ ಮೊದಲ ಸ್ಲಾಟ್‌ನಲ್ಲಿ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಅತ್ಯುತ್ತಮ ರ್ಯಾಂಕ್ ಗಳಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಜಯಂತ್ ಹೆಚ್ ಎಸ್, ಶೇಕಡ 99.06 ಪರ್ಸಂಟೈಲ್ ಗಳಿಸಿ ಹೊಸ ದಾಖಲೆಯೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಚಿನ್ಮಯಿ ಎಂ. ಗೌಡ, ಯಶಸ್ ಡಿ, ಮರುಳಸಿದ್ದನಗೌಡ ಎನ್, ಮದುಸೂಧನ್ ಕೆ. ಎಂ, ಸುಮಧ್ವಕೃಷ್ಣ ಹೆಚ್. ಎಂ., ಆಯುಶ್ ಟಿ ವಂಶಿಕೃಷ್ಣ, ಹಾಗೂ ಮುಸ್ಕಾನ್ ಸಿ ಎ. ಕ್ರಮವಾಗಿ 97.70, 96.12, 96.04, 95.00, 92.87, 91.31, 90.05 ಹಾಗೂ 90.05 ಪರ್ಸಂಟೈಲ್ ಗಳಿಸಿದ್ದಲ್ಲದೆ, ಒಟ್ಟು 53 ವಿದ್ಯಾರ್ಥಿಗಳು ʼಜೆಇಇ ಮೈನ್ಸ್ʼ ಮೊದಲ ಸ್ಲಾಟ್‌ನಲ್ಲಿ ಅತ್ಯುತ್ತಮ ಅಂಕಗಳಿಸಿ ʼಜೆಇಇ ಅಡ್ವಾನ್ಸ್ಡ್ʼ ಗೆ ಅರ್ಹತೆಗಳಿಸಿದ್ದಾರೆ.
ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ. ರವಿ ಟಿ ಎಸ್, ಪ್ರಾಂಶುಪಾಲರಾದ ಶ್ರೀ ಗಂಗಾಧರ್ ಈ. ಹಾಗೂ ಎಲ್ಲಾ ಉಪನ್ಯಾಸಕರು ಅಭಿನಂದಿಸಿದ್ದಾರೆ.