ಯಾರೂ ಏನೇ ಹೇಳಿದರೂ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡುತ್ತೀನಿ ಅಂತ ಜನಾರ್ದನ ರೆಡ್ಡಿ ಸನ್ನದ್ಧರಾಗಿ ನಿಂತಿದ್ದಾರೆ. ಅತ್ತ ಕಡೆ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಆಗಬಾರದು ಅನ್ನೋ ಕಾರಣಕ್ಕೆ ರೆಡ್ಡಿ ಆಪ್ತ ಶ್ರೀರಾಮುಲು ಅವರನ್ನು ಬಿಟ್ಟು ಮನವೊಲಿಸುವುದಕ್ಕೆ ಬಹಳ ಪ್ರಯತ್ನ ನಡೆಯುತ್ತಿದೆ. ಆದರೆ ಪ್ರಯತ್ನಗಳೆಲ್ಲಾ ವಿಫಲವಾದಂತೆ ಕಾಣುತ್ತಿದೆ.
ಹೈಕಮಾಂಡ್ ಹೇಳಿದಕ್ಕೆ ಶ್ರೀರಾಮುಲು ಹೂಗೊಟ್ಟು ಗೆಳೆಯನ ಮನವೊಲಿಕೆಗೆ ಮನಸ್ಸು ಮಾಡಿದರೂ ಪ್ರಯೋಜವಾಗಿಲ್ಲ. ಇದೆಲ್ಲವನ್ನು ಬಿಟ್ಟು ಶ್ರೀರಾಮುಲು, ತಮ್ಮ ಪಕ್ಷದಲ್ಲಿಯೇ ರೆಡ್ಡಿ ಅವರನ್ನು ಉಳಿಸಿಕೊಳ್ಳಲು ಹೈಕಮಾಂಡ್ ಗೆ ಮನವೊಲಿಸಿಲು ದೆಹಲಿಗೆ ರಹಸ್ಯವಾಗಿ ಹೋಗಿದ್ದರಂತೆ. ಆದರೆ ಗೃಹ ಸಚಿವ ಅಮಿತ್ ಶಾ ಅವರ ಬೆಂಬಲ ಸಿಕ್ಕಿಲ್ಲವಂತೆ. ಆದರೆ ರಾಮುಲುಗಿಂತ ಎರಡು ದಿನ ಮುಂಚಿತವಾಗಿಯೇ ಜನಾರ್ದನ ರೆಡ್ಡಿ ಕೂಡ ದೆಹಲಿಗೆ ತೆರಳಿದ್ದಾರಂತೆ.
ಈಗಾಗಲೇ ಆಪ್ತರ ಮೂಲಕ ಹೊಸ ಪಕ್ಷದ ರಿಜಿಸ್ಟರ್ ಕೂಡ ಮಾಡಿಸಿದ್ದಾರಂತೆ. ಆ ಪಕ್ಷಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರಿಡಲಾಗಿದೆಯಂತೆ. ಹೊಸ ಪಕ್ಷ ಸ್ಥಾಪನೆ ಮಾಡದಂತೆ ಶ್ರೀರಾಮುಲು ಮನವಿ ಮಾಡಿಕೊಂಡಿದ್ದರು, ರೆಡ್ಡಿ ಹೊಸ ಪಕ್ಷದ ಸ್ಥಾಪನೆಯನ್ನು ಮಾಡಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.