ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಅನೌನ್ಸ್ ಮೆಂಟ್ ಒಂದೇ ಬಾಕಿ ಇದೆ. ಈ ಗೆಲುವಿನ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದು, ಎರಡು ರಾಜ್ಯದಲ್ಲಿ ಬಿಜೆಪಿ ಎರಡು ರಾಜ್ಯದಲ್ಲಿ ಕಾಂಗ್ರೆಸ್ ಎಂದು ಎಕ್ಸಿಟ್ ಪೋಲ್ ಹೇಳಿತ್ತು. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಶಕ್ತಿಯೇ ಇಲ್ಲ ಎಂದಿದ್ದಾರೆ.
ತೆಲಂಗಾಣದಲ್ಲಿ ರಾಜ್ಯ ನಾಯಕರು ಪ್ರಚಾರ ಮಾಡಿದ್ದರಿಂದ ಗೆದ್ದಿಲ್ಲ, ಬದಲಿಗೆ ಇಲ್ಲಿಂದ (ಕರ್ನಾಟಕದಿಂದ) ರವಾನೆಯಾದ ಹಣದಿಂದ ಕಾಂಗ್ರೆಸ್ ಗೆದ್ದಿದೆ. ಜೊತೆಗೆ ನಾನಾ ರೀತಿಯ ತೀರ್ಮಾನಗಳಿಂದ ಕಾಂಗ್ರೆಸ್ ಗೆದ್ದಿದೆ. ಲೋಕಸಭಾ ಚುನಾವಣೆಯ ಬಳಿಕ ತೆಲಂಗಾಣದಲ್ಲಿ ಏನಾಗುತ್ತೆ ಎಂಬುದನ್ನು ನೋಡೋಣಾ. ನಿಖರ ಮಾಹಿತಿ ಬಂದ ಬಳಿಕ ಮಾತನಾಡೋಣಾ ಎಂದು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕದ ಗೆಲುವುನ ಬಳಿಕ ತೆಲಂಗಾಣದ ಗೆಲುವಿಗಾಗಿ ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಕರ್ನಾಟಕದಿಂದಲೂ ನಾಯಕರು ತೆಲಂಗಾಣಕ್ಕೆ ಹೋಗಿ ಪ್ರಚಾರ ಕಾರ್ಯ ಮಾಡಿದ್ದಾರೆ. ಹೀಗಾಗಿ ಈ ಬಾರಿಯ ಗೆಲುವುದು ನಮ್ಮದೇ ಎಂದು ಕಾಂಗ್ರೆಸ್ ಬೀಗಿತ್ತು. ಅದತಂತೆ ತೆಲಂಗಾಣ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಕಾಂಗ್ರೆಸ್ ಮುಂದಿದೆ.