Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೌಢಶಾಲೆ ಮಕ್ಕಳಲ್ಲಿ ವೈಜ್ಞಾನಿಕ ವಿಷಯಗಳನ್ನು ಬಿತ್ತುವುದು ಅತ್ಯಗತ್ಯ : ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.16  : ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತಿರುವುದರಿಂದ ಪೌಢಶಾಲೆ ಮಕ್ಕಳಲ್ಲಿ ವೈಜ್ಞಾನಿಕ ವಿಷಯಗಳನ್ನು ಬಿತ್ತುವುದು ಅತ್ಯಗತ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಹೇಳಿದರು.

ಇಂಡಿಯಾ ಲಿಟರೆಸಿ ಪ್ರಾಜೆಕ್ಟ್, ಕೆನ್ನಮೆಟಲ್ ಇಂಡಿಯಾ ಲಿ. ಬೆಂಗಳೂರು ಇವರುಗಳ ಸಹಯೋಗದೊಂದಿಗೆ ತಾಲ್ಲೂಕಿನ 80 ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಡಯಟ್‍ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಕಿಟ್ ವಿತರಣೆ ಹಾಗೂ ವಿಜ್ಞಾನ ಶಿಕ್ಷಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಗಾಟಿಸಿ ಮಾತನಾಡಿದರು.

ಶಿಕ್ಷಣ ಇಲಾಖೆ ನಿಂತ ನೀರಲ್ಲ. ಸರಾಗ. ರಭಸವಾಗಿ ಹರಿಯುತ್ತಿದೆ. ಬೋಧನೆ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರಯೋಗದ ಮೂಲಕ ಮಕ್ಕಳ ಮನಸ್ಸಿಗೆ ಸುಲಭವಾಗಿ ನಾಟಲು ಸಹಕಾರಿಯಾಗಲಿದೆ. ವಿಜ್ಞಾನವೆಂದರೆ ಪ್ರಯೋಗ. ಬಳಕೆ ಮಾಡುವುದು ಹೇಗೆ ಎನ್ನುವ ಕುರಿತು ಶಿಕ್ಷಕರುಗಳು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ತಂತ್ರಜ್ಞಾನದ ಪ್ರಭಾವ ಮಕ್ಕಳು, ಸಮಾಜದ ಮೇಲೆ ಬೀರುತ್ತಿರುವುದರಿಂದ ಐದರಿಂದ ಹತ್ತನೆ ತರಗತಿ ಮಕ್ಕಳಿಗೆ ವಿಜ್ಞಾನದ ಅರಿವು ಮೂಡಿಸುವುದು ಮುಖ್ಯ ಎಂದು ತಿಳಿಸಿದರು.

ವಿಜ್ಞಾನ ಕಿಟ್‍ನಲ್ಲಿರುವ ಎಲ್ಲಾ ಅಂಶಗಳು ಮಕ್ಕಳಿಗೆ ಪ್ರಯೋಜನವಾಗಬೇಕು. ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಪರಿಸ್ಥಿತಿ ಶೋಚನೀಯವಾಗಿದೆ. ವಿಜ್ಞಾನದ ವಿಷಯ ಕುರಿತು ಮಕ್ಕಳಿಗೆ ಪರಿಚಯಾತ್ಮಕವಾಗಿ ಬೋಧಿಸುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಹಾಗಾಗಿ ವಿಜ್ಞಾನ ಕಿಟ್‍ನ್ನು ಜೋಪಾನವಾಗಿ ಸಂಗ್ರಹಿಸಿ ಕಲಿಕಾ ವರ್ಷಗಳಲ್ಲಿ ಮಕ್ಕಳಿಗೆ ಪೂರಕವಾಗುವಂತೆ ಬಳಸಬೇಕೆಂದು ವಿಜ್ಞಾನ ಶಿಕ್ಷಕರುಗಳಿಗೆ ಎಸ್.ನಾಗಭೂಷಣ್ ಕರೆ ನೀಡಿದರು.

ಐ.ಎಲ್.ಪಿ. ಮ್ಯಾನೇಜರ್ ಮಂಜುನಾಥ್ ಮಾತನಾಡಿ ಹನ್ನೊಂದು ಸಂಸ್ಥೆಗಳು ಒಟ್ಟುಗೂಡಿ ಚರ್ಚಿಸಿ ವಿಜ್ಞಾನ ಕಿಟ್ ವಿತರಣೆ ಹಾಗೂ ಶಿಕ್ಷಕರುಗಳಿಗೆ ಕಾರ್ಯಾಗಾರ ನಡೆಸಲು ತೀರ್ಮಾನಿಸಿದ್ದೇವೆ. ಸರ್ಕಾರಿ ಶಾಲೆಗಳ ಜೊತೆಗೆ ಅನುದಾನಿತ ಪ್ರೌಢಶಾಲೆಗಳ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಿಟ್‍ಗಳನ್ನು ನೀಡಿದ್ದೇವೆ. ಪ್ರಾರಂಭದಲ್ಲಿ ತುಮಕೂರಿನಲ್ಲಿ ಐದು ನೂರು ಶಾಲೆಗಳಿಗೆ ವಿಜ್ಞಾನ ಕಿಟ್‍ಗಳನ್ನು ವಿತರಿಸಲಾಯಿತು. ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನೀಡಲಾಗಿದೆ. ಜಿಲ್ಲೆಯಲ್ಲಿ 317 ಪ್ರೌಢಶಾಲೆಗಳಲ್ಲಿನ ಮಕ್ಕಳಿಗೆ ಪ್ರಯೋಗದ ಮೂಲಕ ವಿಜ್ಞಾನದ ಮಹತ್ವ ತಿಳಿಸಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಡಯಟ್ ಉಪನ್ಯಾಸಕಿಯರುಗಳಾದ ಪೂರ್ಣಿಮ, ಲೀಲಾವತಿ, ಹೆಚ್.ಆರ್.ಸಿ. ಮುಖ್ಯಸ್ಥೆ ಗೀತ ಇವರುಗಳು ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದೀಪಾವಳಿ ಬಳಿಕ ಅಡಿಕೆಯಲ್ಲಿ ಬಂಪರ್ ಏರಿಕೆ : ಶಿವಮೊಗ್ಗ ಮಾರುಕಟ್ಟೆಯಲ್ಲಿ ಈಗ ಬೆಲೆ ಎಷ್ಟಿದೆ..?

ಶಿವಮೊಗ್ಗ: ಕಳೆದ ಕೆಲವು ತಿಂಗಳ ಹಿಂದೆ ಅಡಿಕೆಯಲ್ಲಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಇದೀಗ ದೀಪಾವಳಿ ಬಳಿಕ ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆಯೇ ಕಂಡಿದೆ. ಇದು ಅಡಿಕೆ ಬೆಳೆಗಾರರಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟ ವಿಚಾರವಾಗಿದೆ. ಸದ್ಯಕ್ಕೆ

TV9 Property Expo: ದಿನಾಂಕ : 15-17ರಂದು ಬೆಂಗಳೂರಿನಲ್ಲಿ ಟಿವಿ9 ಎಕ್ಸ್​ಪೋ

ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್​ನಲ್ಲಿ ಮೂರು ದಿನಗಳ ಕಾಲ ಪ್ರಾಪರ್ಟಿ ಎಕ್ಸ್​ಪೋ ನಡೆಯಲಿದೆ. ಟಿವಿ9 ಕನ್ನಡ ಸ್ವೀಟ್ ಹೋಮ್​ನಿಂದ ನವೆಂಬರ್ 15ರಿಂದ 17ರವರೆಗೆ ರಿಯಲ್ ಎಸ್ಟೇಟ್ ಎಕ್ಸ್​ಪೋ ಆಯೋಜನೆ ಮಾಡಲಾಗುತ್ತಿದೆ. ಬೆಂಗಳೂರಿನ

ಕೇಂದ್ರ ಸೇವೆಗೆ ನಿಯೋಜನೆಗೊಂಡ ಸಿ ಶಿಖಾ : ಈ ಐಎಎಸ್ ಆಫೀಸರ್ ಕಂಪ್ಲೀಟ್ ಡಿಟೈಲ್ ಇಲ್ಲಿದೆ

ಬೆಂಗಳೂರು: ರಾಜ್ಯದ ಹಿರಿಯ ಐಎಎಸ್ ಆಫೀಸರ್ ಆಗಿರುವ ಸಿ ಶಿಖಾ ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ. ಶಿಖಾ ಅವರು ಬಿಎಂಟಿಸಿ ಎಂಡಿಯಾಗಿ, ಮೈಸೂರು ಜಿಲ್ಲಾಧಿಕಾರಿ ಸೇರಿದಂತೆ ಹಲವು ವಿಭಾಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಜೊತೆಗೆ

error: Content is protected !!