ಜಾರ್ಖಂಡ್ ಐಟಿ ದಾಳಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಆಕ್ರೋಶ ಹಿರ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಈ ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿಲ್ಲ, ಅದರಲ್ಲಿ ಮುಸ್ಲಿಂಮರಿಗೆ ಪಾಲು ಸಿಗುತ್ತಿಲ್ಲ ಎಂದು ಮೊನ್ನೆಯಷ್ಟೇ ಮುಸ್ಲಿಂ ಓಲೈಕೆ ಭಾಷಣ ಮಾಡಿದ್ದ ಮುಖ್ಯಮಂತ್ರಿ @siddaramaiah ನವರೇ, ಈ ದೇಶದ ಜನರ ಸಂಪತ್ತು ಯಾರ ಬಳಿ ಇದೆ ? ಲೂಟಿ ಹೊಡೆದವರಾರು? ಎಂಬ ನಿಮ್ಮ ಆವೇಶಭರಿತ ಪ್ರಶ್ನೆಗಳಿಗೆ ಐಟಿ ಅಧಿಕಾರಿಗಳು ಇದೀಗ ಉತ್ತರ ದೊರಕಿಸಿಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಏಜೆಂಟರ ಮೇಲೆ ಐಟಿ ದಾಳಿ ನಡೆದಷ್ಟೂ, ಜನರಿಂದ ಲೂಟಿ ಹೊಡೆದ ಅಕ್ರಮ ಕಪ್ಪುಹಣ ಪತ್ತೆಯಾಗುತ್ತಲೇ ಇದೆ. ಸದ್ಯ ನಡೆದಿರುವ ಐಟಿ ದಾಳಿಯಲ್ಲಿ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಬಳಿ ಸರಿ ಸುಮಾರು 156 ಚೀಲಗಳಲ್ಲಿ ಬರೋಬ್ಬರಿ 225 ಕೋಟಿ ನಗದು ಪತ್ತೆ ಪ್ರಕರಣ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕರಾಳ ಮುಖ ದರ್ಶನ ಮಾಡಿಸಿದೆ.
ಸುದೀರ್ಘ ಕಾಲ ಕಾಂಗ್ರೆಸ್ ಲೂಟಿ ಹೊಡೆದಿರುವ ಈ ದೇಶದ ಸಂಪತ್ತು ಎಲ್ಲೆಲ್ಲಿವೇ ಎಂಬುದನ್ನು ಐಟಿ ಇಲಾಖೆ ಪತ್ತೆ ಹಚ್ಚುವ ಮುನ್ನ ನೀವೇ ಹೊರತಂದು ಸಕ್ರಮ ಮಾರ್ಗದಲ್ಲಿ ಜನರಿಗೆ ಹಂಚಿಬಿಡಿ. ಈ ದೇಶದ ಸಂಪತ್ತು ಶತಮಾನಗಳಿಂದಲೂ ಲೂಟಿಯಾಗುತ್ತಲೇ ಇದೆ ಎಂಬುದಕ್ಕೆ ಇತಿಹಾಸವೇ ಇದೆ.
ಮೊದಲಿಗೆ ಮೊಘಲರು, ನಂತರ ಬ್ರಿಟೀಷರು, ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸಿಗರು ಎಂಬುದು ಅಸಲೀ ಸತ್ಯ ಎಂಬುದಕ್ಕೆ ಇಂದಿಗೂ ಪುರಾವೆಗಳು ಸಿಗುತ್ತಲೇ ಇವೆ ಎಂದಿದ್ದಾರೆ.