ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.27 : ಆಂದ್ರಪ್ರದೇಶದ ಅಂತರರಾಜ್ಯ ಕಳ್ಳನನ್ನು ಬಂಧಿಸಿರುವ ಹೊಸದುರ್ಗ ಠಾಣೆ ಪೊಲೀಸರು ಆರೋಪಿಯಿಂದ ಒಟ್ಟು ₹.7,02,000/- ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಆಂದ್ರಪ್ರದೇಶ ರಾಜ್ಯದ ನೆಲ್ಲೂರು ಜಿಲ್ಲೆಯ 41 ವರ್ಷದ ಬಾನಾಲ ಇಚ್ಕೈಲ್ ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ : ಡಿಸೆಂಬರ್ 22 ರಂದು ಹೊಸದುರ್ಗ ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಬ್ಯಾಂಕ್
ಅಫ್ ಬರೋಡ ಬ್ಯಾಂಕಿನ ಮುಂಭಾಗದಲ್ಲಿ ನಿಂತಿದ್ದ ಸ್ವಿಫ್ಟ್ ಕಾರಿನ ಗ್ಲಾಸ್ ಅನ್ನು ಹೊಡೆದು ಕಾರಿನ ಒಳಗೆ ಇದ್ದ ಒಟ್ಟು 10 ಲಕ್ಷ ರೂ ನಗದು ಹಣವನ್ನು ಕಳ್ಳತನವಾಗಿದ್ದು, ಈ ಬಗ್ಗೆ ಹೊಸದುರ್ಗ ಠಾಣೆಯಲ್ಲಿ ಪ್ರಕರಣ
ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಕಳುವಾದ ಹಣ ಮತ್ತು ಆರೋಪಿಯನ್ನು ಪತ್ತೆಮಾಡಲು ಹೊಸದುರ್ಗ ಪೊಲೀಸ್ ನಿರೀಕ್ಷಕರಾದ ತಿಮ್ಮಣ್ಣ ಎನ್. ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡ ರಚಿಸಿದ್ದು, ಆರೋಪಿತರ ಪತ್ತೆಯ ಬಗ್ಗೆ ತಾಂತ್ರಿಕ ಸಹಾಯದಿಂದ ಆರೋಪಿಯಾದ ಬಾನಾಲ ಇಚ್ಕೈಲ್ ನನ್ನು
ಡಿಸೆಂಬರ್ 23 ರಂದು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಆತನಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 7,02,000/- ರೂ ನಗದು ಹಣವನ್ನು
ವಶಪಡಿಸಿಕೊಳ್ಳಲಾಗಿರುತ್ತದೆ.
ಅಂತರ ರಾಜ್ಯ ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಹೊಸದುರ್ಗ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಧರ್ಮೆಂದರ್ ಕುಮಾರ್ ಮೀನಾ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.