ಬೆಂಗಳೂರು: ಮೊನ್ನೆ ಮೊನ್ನೆಯಷ್ಟೇ ಎಸಿಬಿ ಅಧಿಕಾರಗಳು ಕೆಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆಂಬ ಆರೋಪದ ಮೇಲೆ ದಾಳಿ ನಡೆಸಿದ್ದರು. ಇದೀಗ ಅದರಲ್ಲಿ ಮಾಜಿ ಯೋಜನಾ ನಿರ್ದೇಶಕನನ್ನ ಅರೆಸ್ಟ್ ಮಾಡಿದ್ದಾರೆ.
ಆರ್ ಎನ್ ವಾಸುದೇವ್, ನಗರದ ಗ್ರಾಮೀಣ ನಿರ್ಮಿತಾ ಕೇಂದ್ರದ ಮಾಜಿ ಯೋಜನಾ ನಿರ್ದೇಶಕರು. ಎಸಿಬಿ ಅಧಿಕಾರಿಗಳು ಇವರ ಮನೆ ಮೇಲೂ ದಾಳಿ ಮಾಡಿದ್ದರು. ಆಗ ಅಪಾರವಪ್ರಮಾಣದ ಆಸ್ತಿ ಪತ್ರಗಳು, ಚಿನ್ನ, ಬೆಳ್ಳಿಯೂ ಸಿಕ್ಕಿತ್ತು. ಇದೀಗ ಆದಾಯಕ್ಕಿಂತ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾರೆಂಬ ಆರೋಪದ ಮೇಲೆ ಬೆಂಗಳೂರು ಗ್ರಾಮಾಂತರ ಎಸಿಬಿ ಅಧಿಕಾರಿಗಳು ಈತನನ್ನ ಬಂಧಿಸಿದ್ದಾರೆ.
ವಾಸುದೇವ್ ಕುಟುಂಬಸ್ಥರ ಹೆಸರಿನಲ್ಲಿಯೆ 28 ಮನೆಗಳನ್ನ ಹೊಂದಿದ್ದಾರೆ ಎನ್ನಲಾಗಿದೆ. ಹೆಂಡತಿ ಹೆಸರಿನಲ್ಲಿ ಮಲ್ಲೇಶ್ವರಂ, ಕೆಂಗೇರಿಯ ಎರಡು ಕಡೆ ಮನೆ. ಪುತ್ರನ ಹೆಸರಿನಲ್ಲಿ ಸೋಂಪುರ ಗ್ರಾಮದಲ್ಲಿ ಮನೆ ಹಾಗೂ ಕೆಲವೆಡೆ ಜಮೀನು. ನೆಲಮಂಗಲದ ಬ್ಯಾರಾಮೌಂಟ್ ಅಪಾರ್ಟ್ಮೆಂಟ್ ನಲ್ಲಿ ಫ್ಲ್ಯಾಟ್ ಕೂಡ ಹೊಂದಿದ್ದು, ಆದಾಯಕ್ಕಿಂತ 203%ರಷ್ಟು ಆಸ್ತಿ ಹೊಂದಿದ್ದಾರೆಂಬ ಆರೋಪ ಕೇಳಿ ಬಂದಿದೆ.