Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೆ.16 ರಂದು 1000 ಎಂ.ಟಿ.ಸಾಮಥ್ರ್ಯದ ಉಗ್ರಾಣದ ಉದ್ಘಾಟನಾ ಸಮಾರಂಭ : ಹೆಚ್.ಎಂ.ಮಂಜುನಾಥಪ್ಪ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ಎ.ಪಿ.ಎಂ.ಸಿ.ಯಾರ್ಡ್ ಸಿ.ಬ್ಲಾಕ್ ಆವರಣದಲ್ಲಿ ದಿವಂಗತ ಎಂ.ಗಂಗಾಧರಯ್ಯನವರ ಜ್ಞಾಪಕಾರ್ಥವಾಗಿ 89 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಒಂದು ಸಾವಿರ ಎಂ.ಟಿ.ಸಾಮಥ್ರ್ಯದ ಉಗ್ರಾಣದ ಉದ್ಘಾಟನಾ ಸಮಾರಂಭ ಸೆ.16 ರಂದು ಬೆಳಿಗ್ಗೆ 11-30 ಕ್ಕೆ ನಡೆಯಲಿದೆ ಎಂದು ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ.ಮಂಜುನಾಥಪ್ಪ ತಿಳಿಸಿದರು.

ಮಂಗಳವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಹಕಾರ ಸಚಿವ ಹೆಚ್.ಟಿ.ಸೋಮಶೇಖರ್ ನೂತನ ಉಗ್ರಾಣ ಉದ್ಘಾಟಿಸಲಿದ್ದು, ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್, ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಸಚಿವ ಡಿ.ಸುಧಾಕರ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಎಸ್.ಆರ್.ಗಿರೀಶ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಸಹಕಾರ ಯೂನಿಯನ್ ಪ್ರಭಾರ ಅಧ್ಯಕ್ಷ ಎನ್.ಮಂಜುನಾಥ್ ಇವರುಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ಹೇಳಿದರು.

73 ವಸಂತಗಳನ್ನು ಕಳೆದಿರುವ ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಇಂದು ದೊಡ್ಡ ಹೆಮ್ಮರವಾಗಿ ಬೆಳೆದು 80 ಲಕ್ಷ ರೂ.ಲಾಭದಲ್ಲಿದೆ. ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಉತ್ತಮವಾದ ರಸಗೊಬ್ಬರ ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಪರಿಕರಗಳನ್ನು ಮಾರಾಟ ಮಾಡಲಾಗುತ್ತಿದೆ. ಜನರಿಕ್ ಔಷಧಿ ಕೇಂದ್ರವನ್ನು ತೆರೆದಿದ್ದೇವೆ. ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯ ಸಲಕರಣೆಗಳನ್ನು ಪೂರೈಸುವುದಕ್ಕಾಗಿ ಜನತಾ ಬಜಾರ್ ಮಾದರಿಯಲ್ಲಿ ಮಳಿಗೆಯನ್ನು ಆರಂಭಿಸಲಾಗುವುದು. 25 ವರ್ಷಗಳಿಂದ ಸಗಟು ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಆರಂಭದಲ್ಲಿ ಕೇವಲ ಇನ್ನೂರು ಸದಸ್ಯರಿದ್ದು, ಈಗ 1776 ಸದಸ್ಯರುಗಳಿದ್ದಾರೆಂದರು.

ಎ.ಪಿ.ಎಂ.ಸಿ.ಯಿಂದ ಮೂರು ಗೋಡಾನ್‍ಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಸರ್ಕಾರದಿಂದ ಸಾಲ ತೆಗೆದುಕೊಂಡಿಲ್ಲ. ಸ್ವಂತ ಬಂಡವಾಳದಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದು, ರೈತರಿಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶ ಎಂದು ವಿವರಿಸಿದರು.
ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ಸಿ.ಕುಬೇರಪ್ಪ, ನಿರ್ದೇಶಕರುಗಳಾದ ಹೆಚ್.ಎನ್.ಹನುಮಂತಪ್ಪ, ಎ.ಈಶ್ವರಪ್ಪ, ಜಿ.ಆರ್.ಧನಂಜಯ, ಎನ್.ಕಲ್ಲೇಶ್, ವಿ.ವಿಶ್ವನಾಥಪ್ಪ, ಎ.ಎಂ.ಆನಂದಪ್ಪ, ಎನ್.ಹೆಚ್.ಮಂಜುನಾಥ್, ವೈ.ಪ್ರಕಾಶ್, ಎಸ್.ಹೆಚ್.ತಿಪ್ಪೇಸ್ವಾಮಿ, ಬಿ.ಲೋಲಾಕ್ಷಮ್ಮ, ಶ್ರೀಮತಿ ಜಿ.ಎಂ.ಪುಷ್ಪ, ಡಿ.ಸಿ.ಸಿ.ಬ್ಯಾಂಕ್ ನಾಮ ನಿರ್ದೇಶಕ ಎಂ.ನಿಶಾನಿ ಜಯಣ್ಣ, ಸರ್ಕಾರದ ನಾಮ ನಿರ್ದೇಶಕ ಕೆ.ಜೆ.ಶ್ರೀಧರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಾರುಕಟ್ಟೆಗೆ ಬಂತು ನ್ಯಾನೋ ಎಲೆಕ್ಟ್ರಾನಿಕ್ ಕಾರು : ಏನಿಲ್ಲಾ ವಿಶೇಷತೆ ಇದೆ ಗೊತ್ತಾ..?

ಎಲೆಕ್ಟ್ರಾನಿಕ್ ಬೈಕ್, ಕಾರುಗಳಿಗೆ ಭಾರತದಲ್ಲಿ ಸಿಕ್ಕಪಟ್ಟೆ ಡಿಮ್ಯಾಂಡ್ ಇದೆ. ಪೆಟ್ರೋಲ್ ದರ ಏರಿಕೆಯಾದ ಬೆನ್ನಲ್ಲೇ ಜನ ಎಲೆಕ್ಟ್ರಾನಿಕ್ ಮೊರೆ ಹೋಗುತ್ತಿದ್ದಾರೆ‌.‌ಇದೇ ಕಾರಣಕ್ಕಾಗಿಯೇ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯೂ ಹೆಚ್ಚಳವಾಗುತ್ತಿದೆ. ಇದೀಗ ಭಾರತಕ್ಕೆ ನ್ಯಾನೋ ಎಲೆಕ್ಟ್ರಾನಿಕ್ ಕಾರು

ಬರ, ಬೆಳೆ ನಾಶದಿಂದ ಕಂಗೆಟ್ಟ ರೈತರ ಕಣ್ಣಲ್ಲಿ ನೀರು ತರಿಸಬಾರದು : ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಿಡುಗಡೆಯಾದರೂ, ಕೆಲವು ಬ್ಯಾಂಕ್ ಗಳು ಅದನ್ನ ಸಾಲದ ಮೊತ್ತಕ್ಕೆ ವಜಾ ಮಾಡಿಕೊಳ್ಳುತ್ತಿವೆ. ಯಾದಗಿರಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಬೆಳವಣಿಗೆ ರೈತರಿಗೂ ಆತಂಕ ತಂದೊಡ್ಡಿದೆ. ಬೆಳೆನಾಶದ

ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಬಿಜೆಪಿಯ ಪ್ರೀತಂಗೌಡ ಆಪ್ತರ‌ ಮನೆಯಲ್ಲಿ 10 ಪೆನ್ ಡ್ರೈವ್ ಪತ್ತೆ..!

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯ ಹಾಸನದಲ್ಲಿ ತಪಾಸಣೆ ನಡೆಸುತ್ತಿದ್ದು, ಪ್ರೀತಂಗೌಡ ಆಪ್ತರ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಹತ್ತು ಪೆನ್ ಡ್ರೈವ್

error: Content is protected !!