ಮೈಸೂರು: ಇವತ್ತು ಪ್ರತಾಪ್ ಸಿಂಹ ಅವರಿಗೆ ಹುಟ್ಟಿದ ಪ್ರಶ್ನೆಯೇ ಕೋಟ್ಯಾಂತರ ಜನರ ತಲೆಯಲ್ಲಿ ಕೊರೆಯುತ್ತಿರುವುದು. ಕೊರೊನಾ ಕಂಟ್ರೋಲ್ ಆಗಲಿಲ್ಲವೆಂದರೆ ವ್ಯಾಕ್ಸಿನ್ ಹಾಕಿದ್ದಾದರೂ ಯಾಕೆ ಎಂಬ ಪ್ರಶ್ನೆ. ಈ ಪ್ರಶ್ನೆಯನ್ನ ಇವತ್ತು ಸ್ವಪಕ್ಷದ ಸಂಸದರೇ ಸರ್ಕಾರಕ್ಕೆ ಕೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ವಿಧಿಸಿರುವ ನೈಟ್ ಕರ್ಫ್ಯೂ ವನ್ನು ಕೂಡಲೇ ತೆರವು ಮಾಡಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ನೈಟ್ ಕರ್ಫ್ಯೂ, ಲಾಕ್ಡೌನ್ ನಂತಹ ಕ್ರಮಗಳನ್ನ ತೆಗೆದುಕೊಳ್ಳುವುದಾದರೇ ಮತ್ತೆ ವ್ಯಾಕ್ಸಿನ್ ಹಾಕಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕರ್ಫ್ಯೂ, ಲಾಕ್ಡೌನ್ ನಿಂದಾಗಿ ಜನರಿಗೆ ಬಹಳ ತೊಂದರೆಯಾಗುತ್ತಿದೆ. ಜನರ ಜೀವ, ಜೀವನ ಎರಡು ಮುಖ್ಯ. ಜೀವ ಉಳಿಸಿಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವ. ಈಗ ಜೀವನ ಉಳಿಸಿಕೊಳ್ಳಲು ಕರ್ಫ್ಯೂ ತೆಗೆಯಿರಿ. ಈಗ ಪಂಚರಾಜ್ಯಗಳ ಚುನಾವಣೆ ಅನೌನ್ಸ್ ಆಗಿದೆ. ಅಲ್ಲಿ ರ್ಯಾಲಿ, ಸಭೆ ಸಮಾರಂಭ ನಡೆಯುವುದಿಲ್ಲವಾ..? ಹೀವಿರುವಾಗ ಕರ್ನಾಟಕದಲ್ಲಿ ಮಾತ್ರ ಯಾಕೆ ಕರ್ಫ್ಯೂ ವಿಧಿಸಿ ಜನರನ್ನು ಕಂಗಾಲು ಮಾಡ್ತಿರುವುದು ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.