Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತ್ರಿವರ್ಣ ಧ್ವಜದಲ್ಲಿ ಮೆಕ್ಕಾ ಮತ್ತು ದರ್ಗಾ ಚಿತ್ರ : ಚಳ್ಳಕೆರೆಯಲ್ಲಿ ಕಿಡಿಗೇಡಿಗಳ ಕುಕೃತ್ಯ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.10 : ರಾಷ್ಟ್ರ ಧ್ವಜ ರಾಷ್ಟ್ರದ ಗೌರವ ಮತ್ತು ಭಾರತೀಯರ ರಾಷ್ಟ್ರೀಯತೆಯನ್ನು ಬಿಂಬಿಸುವ ಲಾಂಛನವಾಗಿದೆ. ನಮ್ಮ ಸಂವಿಧಾನದಲ್ಲಿ ರಾಷ್ಟ್ರ ಧ್ವಜಕ್ಕೆ ತನ್ನದೇ ಆದ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಅಂತಹ ರಾಷ್ಟ್ರಧ್ವಜಕ್ಕೆ ಅವಮಾನವಾದರೆ ಭಾರತೀಯರಿಗೆ ಸಹಿಸಿಕೊಳ್ಳಲಾಗುವುದಿಲ್ಲ.

ಆದರೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಇಮಾಂಪುರ ಬಂಡೆಹಟ್ಟಿ ಗ್ರಾಮದ ಬಳಿ ತ್ರಿವರ್ಣ ಧ್ವಜವನ್ನು ವಿರೂಪಗೊಳಿಸಿ ಅವಮಾನ ಮಾಡಿರುವ ಘಟನೆ ನಡೆದಿದೆ. ಯಾರೋ ಕಿಡಿಗೇಡಿಗಳು ತ್ರಿವರ್ಣ ಧ್ವಜದಲ್ಲಿಯೇ ಮೆಕ್ಕಾ ಮತ್ತು ದರ್ಗಾ ಚಿತ್ರ ರೂಪಿಸಿ ವಿಕೃತಿ ಮೆರೆದಿದ್ದಾರೆ. ಆ ಬಾವುಟವನ್ನು ಊರಿನ ಹೆಸರನ್ನು ಸೂಚಿಸುವ ನಾಮಫಲಕದ ಕಂಬಕ್ಕೆ ಕಟ್ಟಿ ವಿವಾದವನ್ನುಂಟು ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವಹಿಂದೂ ಪರಿಷದ್, ಬಜರಂಗದಳ ಕಾರ್ಯಕರ್ತರು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರು ಸೇರಿದಂತೆ ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿ ತೀವ್ರವಾಗಿ ಖಂಡಿಸಿದ್ದಾರೆ. ಸಮಾಜದಲ್ಲಿ ಶಾಂತಿ ಸಾಮರಸ್ಯವನ್ನು ಕದಡುವಂತ ಮತ್ತು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಠಿಣ ಕಾನೂನಿನ ಕ್ರಮವನ್ನು ಕೈಗೊಳ್ಳಬೇಕೆಂದು ಚಳ್ಳಕೆರೆ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಳ್ಳಕೆರೆ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

ಅಭಿಮಾನಿಗಳು, ಕಾರ್ಯಕರ್ತರಿಗೆ ಪ್ರೀತಿಯ ಪತ್ರ ಬರೆದು, ಮನವಿ ಮಾಡಿದ ದೇವೇಗೌಡರು..!

ಬೆಂಗಳೂರು: ದೊಡ್ಡಗೌಡರ ಮನೆಯಲ್ಲಿ ಇನ್ನು ಬೇಸರದ ಛಾಯೆ ಆರಿಲ್ಲ. ಯೋಚನೆ, ನೋವಲ್ಲಿಯೇ ಇದ್ದಾರೆ. ಯಾಕಂದ್ರೆ ಮಾಜಿ ಪ್ರಧಾನಿಗಳ ಕುಟುಂಬದಲ್ಲಿ ಇಂಥದ್ದೊಂದು ಅಪವಾದ ಬಂದರೆ ಸಹಿಸುವುದಾದರೂ ಹೇಗೆ..? ದೇವೇಗೌಡರಿಗೆ ಈಗಾಗಲೇ 91 ವರ್ಷ ವಯಸ್ಸಾಗಿದೆ. ಅವರ

error: Content is protected !!