Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಳೆಹಣ್ಣು ಕೊಟ್ಟ ತಾತ ಇನ್ನಿಲ್ಲ.. ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ ಕೋತಿ.. ವಿಜಯನಗರದಲ್ಲಿ ಮನಕಲುಕುವ ಘಟನೆ..!

Facebook
Twitter
Telegram
WhatsApp

ವಿಜಯನಗರ: ಮನುಷ್ಯನಿಗಿಂತ ಪ್ರಾಣಿಗಳೇ ಮೇಲೂ ಅನ್ನೋದು ಆಗಾಗ ಪ್ರೂವ್ ಆಗ್ತಾನೆ ಇರುತ್ತೆ. ಮನುಷ್ಯನಿಗೆ ನೀನೆ ಎಷ್ಟೇ ಉಪಕಾರ ಮಾಡಿದರೂ ಅದನ್ನ ಯಾವಾಗಲಾದರೂ ಒಮ್ಮೆ ಮರೆತು ಬಿಡುತ್ತಾರೆ. ಆದರೆ ಪ್ರಾಣಿಗಳು ಹಂಗಲ್ಲ. ಯಾರೋ ಒಬ್ಬರು ಹೊಟ್ಟೆಗೆ ಊಟ ಹಾಕಿದರೂ ಎಂದರೆ, ಅವರನ್ನು ಯಾವತ್ತಿಗೂ ಮರೆಯುವುದಿಲ್ಲ. ಅವರ ಹಿಂದೆ‌ಮುಂದೆಯೇ ಓಡಾಡುತ್ತವೆ. ನಿಶ್ವಲ್ಮಶ ಪ್ರೀತಿಯಷ್ಟೇ ಪ್ರಾಣಿಗಳಿಗೆ ಗೊತ್ತಾಗುವುದು.

ಈಗ ಪ್ರಾಣಿಯ ಮತ್ತೊಂದು ಪ್ರೀತಿ ಅನಾವರಣವಾಗಿದೆ. ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಕೋತಿ ನಡೆದುಕೊಂಡ ರೀತಿಗೆ ಎಲ್ಲರಿಗೂ ಕಣ್ತುಂಬಿ ಬಂದಿದೆ. ಪ್ರತಿನಿತ್ಯ ಕಾಳಜಿ ತೋರಿಸುತ್ತಿದ್ದ ತಾತನನ್ನು ಕಳೆದುಕೊಂಡ ಕೋತಿ ಕಣ್ಣೀರು ಹಾಕುತ್ತಾ ಕೂತಿದೆ.

ಹಳೆ ಹಗರಿಬೊಮ್ಮನಹಳ್ಳಿಯಲ್ಲಿ 88 ವರ್ಷದ ಪರಶುರಾಮ್ ಷಾ ಎಂಬ ವೃದ್ಧ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರೆಲ್ಲಾ ತಾತನನ್ನು ಕಳೆದುಕೊಂಡ ದುಃಖದಲ್ಲಿದ್ದರು. ಈ ವೇಳೆ ಅಲ್ಲಿಗೆ ಬಂದ ಕೋತಿ, ತಾತನ ಹಣೆಗೆ ಮುತ್ತಿಟ್ಟು, ಅಂತಿಮ ವಿದಾಯ ಹೇಳಿದೆ. ಕಳೆದ ಎರಡು ತಿಂಗಳಿನಿಂದ ಪರಶುರಾಮ್, ಈ ಕೋತಿಗೆ ಪ್ರತಿನಿತ್ಯ ಬಾಳೆ ಹಣ್ಣು ನೀಡುತ್ತಿದ್ದರು. ಹುಟ್ಟುಹಬ್ಬವಾದ ಮರುದಿನವೇ ಪರಶುರಾಮ್ ನಿಧನರಾಗಿದ್ದಾರೆ. ಅದರಲ್ಲೂ ಶ್ರೀರಾಮನವಮಿಯಂದೇ ನಿಧನರಾಗಿದ್ದರು. ಈ ಫೋಟೋ, ವಿಡಿಯೋ ವೈರಲ್ ಆಗಿದೆ. ಕೋತಿಯ ಪ್ರೀತಿ ಕಂಡು ಜನ ಕೂಡ ಭಾವುಕರಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ಸಮಸ್ಯೆ ಇರುವವರು ಕಬ್ಬಿನ ರಸವನ್ನು ಕುಡಿಯಬೇಡಿ….!

ಸುದ್ದಿಒನ್ : ಬೇಸಿಗೆಯಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಜ್ಯೂಸ್, ತಂಪು ಪಾನೀಯಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ. ನಿಂಬೆ ಹಣ್ಣಿನ ರಸ, ಮಜ್ಜಿಗೆ ಮತ್ತು ಕಬ್ಬಿನ ರಸವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಕಬ್ಬಿನ ರಸವನ್ನು ಕುಡಿಯಲು

ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ

ಈ ರಾಶಿಗಳ ಸಂಸಾರದಲ್ಲಿ ಏನಾಯ್ತು? ಆಶ್ಚರ್ಯ! ಇಂದು ನಿಮಗೆ ಭೂ ವ್ಯವಹಾರಗಳಲ್ಲಿ ಉತ್ತಮ ಆದಾಯ ಸಿಗಲಿದೆ, ಶನಿವಾರ ರಾಶಿ ಭವಿಷ್ಯ -ಮೇ-18,2024 ಸೂರ್ಯೋದಯ: 05:47, ಸೂರ್ಯಾಸ್ತ : 06:38 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಇದೆಲ್ಲಾ ಮಾಡಿಸಿದ್ದು ಡಿಕೆಶಿ.. ನಾನು ಹೊರಗೆ ಬಂದ ದಿನ ಸರ್ಕಾರ ಪತನವಾಗುತ್ತೆ : ವಕೀಲ ದೇವರಾಜೇಗೌಡ ಶಾಕಿಂಗ್ ಹೇಳಿಕೆ..!

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಜೆಪಿ ನಾಯಕ, ವಕೀಲ ದೇವರಾಜೇಗೌಡರನ್ನು ಪೊಲೀಸರು ಅರೆಸ್ಟ್ ಮಾಡಿ, ತನಿಖೆ ಚುರುಕುಗೊಳಿಸಿದ್ದಾರೆ. ಎಸ್ಐಟಿ ಅಧಿಕಾರಿಗಳು ಇಂದು ಕೋರ್ಟ್ ಮುಂದೆ ದೇವರಾಜೇಗೌಡರನ್ನು ಹಾಜರುಪಡಿಸಿದ್ದರು. ಹೆಚ್ಚಿನ

error: Content is protected !!