ಚಿತ್ರದುರ್ಗ, (ಏ.22) : ಕಮಿಷನರ್ ಕಾರ್ ಮೇಲೆ ನಿಂತು ಪ್ರಚೋದಿಸಿದ ಮೌಲ್ವಿ ವಾಸಿಂ ಮೇಲೆ ಕಾನೂನಿನ ಅಡಿಯಲ್ಲಿ ಕೇಸ್ ದಾಖಲಿಸಬೇಕು.
ಕಮಿಷನರ್ ಕಾರ್ ಮೇಲೆ ನಿಂತ ಕಾಂಗ್ರೆಸ್ ಮುಖಂಡ ಅಲ್ತಾಫ್ ಮೇಲೆ ಗೂಂಡಕಾಯ್ದೆ ಮತ್ತು ದೇಶ ದ್ರೋಹದ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸುತ್ತೇವೆ.
ಮಾ. 16 ರಂದು ಹಳೆ ಹುಬ್ಬಳ್ಳಿ ಸಂಪೂರ್ಣ ಗಲಭೆಯ ತನಿಖೆಯನ್ನು ಎನ್.ಐ.ಎ. ಗೆ ವಹಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
ಪ್ರಜಾಪ್ರಭುತ್ವ ಸಂವಿಧಾನದಲ್ಲಿ ಕಾನೂನು ಸುವ್ಯವಸ್ಥೆಗೆ ಬಹಳ ಮಹತ್ವವಿದ್ದು, ಕಾನೂನು ಕೈಗೆತ್ತಿಕೊಂಡು ಕಾನೂನು ಆರಕ್ಷಕ ಠಾಣೆ ಮೇಲೆ ದಾಳಿ ಮಾಡಿ ಸಿ.ಪಿ.ಐ. ಮತ್ತು ಪೊಲೀಸ್ ಸಿಬ್ಬಂಧಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದು, ಇಡೀ ಸಮಾಜ ಭಯಭೀತಗೊಂಡಿದ್ದು ರಾಜ್ಯದಲ್ಲಿ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣಗೊಂಡಿದೆ.
ಇದರಿಂದ ಕಲ್ಲುತೂರಾಟ ಮತ್ತು ಪೆಟ್ರೋಲ್ ಬಾಂಬ್ ದಾಳಿ ಮಾಡುವ ಇಸ್ಲಾಂ ಮೂಲಭೂತವಾದಿಗಳು ಯಾವುದೇ ಭಯವಿಲ್ಲದೆ ಪೊಲೀಸ್ ಜೀಪನ್ನು ಪಲ್ಟಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ.
ಹಳೆ ಹುಬ್ಬಳ್ಳಿಯ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲರ ಮನೆಯ ಆಸ್ತಿಯನ್ನು ಜಪ್ತಿ ಮಾಡಿ ಸರ್ಕಾರ ಗಲಭೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು, ಮೌಲ್ವಿ ವಾಸಿಂ ಮತ್ತು ಅಲ್ತಾಫ್ ಮನೆಯ ಮೇಲೆ ಬುಲ್ಡೋಜರ್ ಸಂಸ್ಕøತಿ ಅನುಸರಿಸಿ ಕ್ರಮಕೈಗೊಳ್ಳಬೇಕು. ಆಗ ಮಾತ್ರ ಕಾನೂನು ಸುವ್ಯವಸ್ಥೆಗೆ ಬೆಲೆಯನ್ನು ನೀಡುತ್ತಾರೆ.
ಸರ್ಕಾರ ಪ್ರತಿಯೊಬ್ಬ ಪ್ರಜೆಯ ಹಿತ ಕಾಪಾಡುವುದು ಕರ್ತವ್ಯವಾಗಿದ್ದು, ಆದರೆ ಹಳೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿಗಳ ಸಿಬ್ಬಂಧಿಗಳ ಮೇಲೆ ನಡೆದ ಹಲ್ಲೆಯಿಂದ ಸಾರ್ವಜನಿಕ ವಲಯದಲ್ಲಿ ಭಯದ ವಾತವರಣವಾಗಿದ್ದು, ಇಷ್ಟೆಲ್ಲ ಸರ್ಕಾರಕ್ಕೆ ಅವಮಾನದ ಸಂಗತಿಯಾಗಿದ್ದು, ತಕ್ಷಣ ತಪ್ಪಿತಸ್ಥರ ಮನೆ ಮೇಲೆ ಬುಲ್ಡೋಜರ್ ದಾಳಿ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ.
ಈ ಬಗ್ಗೆ ಗಂಭೀರವಾಗಿ ಸರ್ಕಾರ ಕ್ರಮ ಕೈಗೊಳ್ಳದಿದ್ದಲ್ಲಿ ಹುಬ್ಬಳ್ಳಿ ಛಲೋ ನಡೆಸಿ, ಈ ಘಟನೆಯನ್ನು ವಿರೋಧಿಸಲಾಗುವುದು. ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಶಿವಮೊಗ್ಗ ವಿಭಾಗ ಸಂಚಾಲಕ ಪ್ರಭಂಜನ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ. ರುದ್ರೇಶ್, ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್ ಸಹ ಸಂಚಾಲಕ ಕೇಶವ ನಗರ ಸಂಚಾಲಕ ರಂಗಸ್ವಾಮಿ, ಸಹ ಸಂಚಾಲಕ ಶಕ್ತಿ, ಗ್ರಾಮಾಂತರ ಅಧ್ಯಕ್ಷರಾದ ಶಶಿಧರ್, ಕಾರ್ಯಕರ್ತರಾದ ರೇಣು, ಕಿಶೋರ್, ಶ್ರೀನಿವಾಸ್ ಇನ್ನು ಮುಂತಾದವರು ಭಾಗಿಯಾಗಿದ್ದರು.