Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿಂದೂ ಮಹಾಗಣಪತಿ : ಅದ್ದೂರಿಯಾಗಿ ನಡೆದ ಬೈಕ್ ರ‌್ಯಾಲಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ನಗರದ ಹಿಂದೂ ಮಹಾ ಗಣಪತಿಯ ಮಹೋತ್ಸವದ ಅಂಗವಾಗಿ ಇಂದು ನಗರದ ವಿವಿಧ ಬಡಾವಣೆಗಳಲ್ಲಿ ಸೆ. 28ರ ಶೋಭಾಯಾತ್ರೆಯ ಅಂಗವಾಗಿ ಬೈಕ್ ರ‌್ಯಾಲಿ ಯನ್ನು ನಡೆಸಲಾಯಿತು.

ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಕನಕ ವೃತ್ತದಿಂದ ಆರಂಭವಾದ ಬೈಕ್ ರ‌್ಯಾಲಿ ಯನ್ನು ಶಾಸಕ ಕೆ.ಸಿ. ವಿರೇಂದ್ರ, ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ ಉದ್ಘಾಟಿಸಿದರು. ದಾರಿಯುದ್ದಕ್ಕು ಬೈಕ್ ರ‌್ಯಾಲಿ ಯಲ್ಲಿ ಭಕ್ತಾಧಿಗಳು ಜೈ ಶ್ರೀರಾಮ್, ಜೈ ಜೈ ಶ್ರೀರಾಮ ಹಿಂದೂ ಮಹಾ ಗಣಪತಿಕ್ಕಿ ಜೈ ಎಂದು ಕೂಗುತ್ತಾ, ಕೈಯಲ್ಲಿ ಕೇಸರಿ ಧ್ವಜವನ್ನು ಹಿಡಿದು ತೆಲೆಗೆ ಕೇಸರಿ ಪಟ್ಟಿಯನ್ನು ಕಟ್ಟಿಕೊಂಡು ಕೂರಳಿಗೆ ಕೇಸರಿ ಶಾಲನ್ನು ಹಾಕಿ ಕೊಂಡು ದಾರಿಯಲ್ಲಿ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತು. ಇದರೊಂದಿಗೆ ಹಲವಾರು ಭಕ್ತಾಧಿಗಳು ತೆಲೆ ಕೇಸರಿಯ ಪೇಟವನ್ನು ಧರಿಸಿದ್ದು, ಮತ್ತೇ ಕೆಲವರು ಕೇಸರಿಯ ಜಬ್ಬವನ್ನು ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಕಂಡು ಬಂದಿತು.

ಬೈಕ್ ರ‌್ಯಾಲಿ ನಗರದ ಕನಕ ವೃತ್ತದಿಂದ ಪ್ರಾರಂಭವಾಗಿ ಸಂಗೊಳ್ಳಿ ರಾಯಣ್ಣ ವೃತ್ತ, ಬುರುಜನಹಟ್ಟಿ ವೃತ್ತ, ಆನೇ ಬಾಗಿಲು, ಚಿಕ್ಕಪೇಟೆ, ಏಕನಾಥೇಶ್ವರಿ ಪಾದಗುಡಿ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ, ಜಟ್ ಪಟ್ ನಗರ ಸ್ಟೇಡಿಯಂ ರಸ್ತೆ, ಬಿ,ಡಿ,ರಸ್ತೆ, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಒನಕೆ ಓಬವ್ವ ವೃತ್ತದ ಮೂಲಕ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯ ಗೂಳಿಸಲಾಯಿತು.

ಬೈಕ್ ರ‌್ಯಾಲಿ ಸಾಗಿದ ದಾರಿಯುದ್ದಕ್ಕೂ ಜನತೆ ಅಕ್ಕ-ಪಕ್ಕದಲ್ಲಿ ನಿಂತು ಬೈಕ್ ರ‌್ಯಾಲಿ ಹೋಗುತ್ತಿದ್ದ ದೃಶ್ಯವನ್ನು ಕಣ್ಣು ತುಂಬಿಕೊಂಡರು. ಮಹಿಳೆಯರು ಮಕ್ಕಳು ಎನ್ನದೆ ಎಲ್ಲರೂ ದಾರಿಯ ಪಕ್ಕದಲ್ಲಿ ನಿಂತು ಇದನ್ನು ವಿಕ್ಷಣೆ ಮಾಡಿದರು. ಬೈಕ್ ರ್ಯಾಲಿ ಮಧ್ಯದಲ್ಲಿ ಹಲವಾರು ಬೈಕ್‍ಗಳು ವಿವಿಧ ರೀತಿಯ ಶಬ್ದವನ್ನು ಮಾಡುತ್ತಾ ಜನರನ್ನು ತಮ್ಮತ್ತ ಸೆಳೆಯುವ ಕಾರ್ಯವನ್ನು ಮಾಡಿದರು. ಬೈಕ್ ರ‌್ಯಾಲಿ ಜೊತೆಗೆ ಹಲವಾರು ಜೀಪುಗಳು ಕಾರುಗಳು ಸಹಾ ಭಾಗವಹಿಸಿದ್ದು ಕಂಡು ಬಂದಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!