Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಮೇ 30ಕ್ಕೆ ಹಾಸನ ಚಲೋ..!

Facebook
Twitter
Telegram
WhatsApp

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದೇಶದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಪ್ರಜ್ವಲ್ ರೇವಣ್ಣ ಇನ್ನು ವಿದೇಶದಿಂದ ಭಾರತಕ್ಕೆ ಬಂದಿಲ್ಲ. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಇದೀಗ ಹಾಸನ ಚಲೋ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ಜನಪರ ಚಳುವಳಿಗಳ ಒಕ್ಕೂಟದಿಂದ ಈ ಚಲೋ ನಡೆಯಲಿದೆ. ಮಹಿಳೆಯರ ಘನತೆ ಉಳಿಸಿ ಹಾಸನ ಗೌರವ ಕಾಪಾಡಿ ಎಂಬ ಸ್ಲೋಗನ್ ನೊಂದಿಗೆ ಹಾಸನ ಚಲೋ ನಡೆಸಲಿದ್ದಾರೆ.

ಸಂಘಟನೆಯ ಮುಖಂಡ ಧರ್ಮೇಶ್ ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಮೇ 30ಕ್ಕೆ ಬೃಹತ್ ಹೋರಾಟ ನಡೆಯಲಿದೆ. ಇದರಲ್ಲಿ ಅನೇಕ ಹೋರಾಟಗಾರರು, ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರು ಭಾಗಿಯಾಗಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ವಿಡಿಯೋ ಬಹಿರಂಗ ಮಾಡಿದವರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಹೋರಾಟದ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಸರ್ಕಾರಿ ಪ್ರಾಯೋಜಿತ ಹೋರಾಟ ಎಂದು ಹೇಳಿದ್ದಾರೆ. ಈ ಮಾತನ್ನು ಹಿಂತೆಗೆದುಕೊಳ್ಳಬೇಕು. ಇದು ಬೇಜವಾಬ್ದಾರಿಯ ಹೇಳಿಕೆ. ಹಾಗಿದ್ದರೆ ಅವರು ಮಹಿಳೆಯರ ಪರವಾಗಿ ಇಲ್ಲವೇ..? ಇಷ್ಟೊಂದು ದೊಡ್ಡ ಹಗರಣವಾಗಿರುವಾಗ ಅವರ ಈ ಹೇಳಿಕೆಗಳನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಹೊರ ಬೀಳುತ್ತಿದ್ದಂತೆ ವೋಟ್ ಹಾಕಿ ಎಸ್ಕೇಪ್ ಆದವರು, ಇನ್ನು ಅವರ ಸುಳಿವಿಲ್ಲ. ಫಲಿತಾಂಶ ಬಂದ ಮೇಲೆ ಅವರು ವಾಪಾಸ್ಸಾಗುತ್ತಾರೆಂಬ ಮಾತಿದೆ. ಆದರೆ ಅದಕ್ಕೂ ಮುನ್ನ ಅವರನ್ನು ಬಂಧಿಸಿ, ಕಠಿಣ ಕ್ರಮ ನೀಡಬೇಕೆಂದು ಸಂಘಟನೆಗಳು ಆಗ್ರಹಿಸಿವೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೂಡಾ ಹಗರಣವನ್ನು ಗಮನಕ್ಕೆ ತಂದಿದ್ದ ಡಿಸಿ ಸೇರಿದಂತೆ 21 ಐಎಎಸ್ ಅಧಿಕಾರಿಗಳ ವರ್ಗಾವಣೆ..!

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ಹಗರಣ ಸದ್ಯ ರಾಜ್ಯದಲ್ಲಿಯೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಹಾಗೂ ವಿಪಕ್ಷ ನಾಯಕರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಮೂಡಾ ಹಗರದ ಬಗ್ಗೆ ಒಂದು ವರ್ಷದ ಹಿಂದೆಯೇ ಸರ್ಕಾರದ

ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಭಾಗ್ಯಶಾಲಿ ನಿಮ್ಮನ್ನು ತೂಗುಯ್ಯಾಲೆಲಿ ತೂಗುವರು

ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಭಾಗ್ಯಶಾಲಿ ನಿಮ್ಮನ್ನು ತೂಗುಯ್ಯಾಲೆಲಿ ತೂಗುವರು, ಶುಕ್ರವಾರ- ರಾಶಿ ಭವಿಷ್ಯ ಜುಲೈ-5,2024 ಸೂರ್ಯೋದಯ: 05:50, ಸೂರ್ಯಾಸ್ತ : 06:50 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ

ಬಾಹ್ಯಾಕಾಶಕ್ಕೆ ಪ್ರಧಾನಿ ಮೋದಿ ? ಗಗನ್ ಯಾನ್ ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರು ಹೇಳಿದ್ದೇನು ?

ಸುದ್ದಿಒನ್ : ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ‘ಗಗನ್ ಯಾನ್’ ಮಿಷನ್ ಲಭ್ಯವಾದ ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ಅಲ್ಲಿಗೆ ಹೋಗಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು. ನಮ್ಮ

error: Content is protected !!