Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಂತ್ರ ಕುತಂತ್ರದಿಂದ ಅತಿಥಿ ಉಪನ್ಯಾಸಕರ ಬದುಕನ್ನ ಇನ್ನಷ್ಟು ಅಭದ್ರಗೊಳಿಸಿದೆ : ಸಿದ್ದರಾಮಯ್ಯ

Facebook
Twitter
Telegram
WhatsApp

ಬೆಂಗಳೂರು: ಅತಿಥಿ ಉಪನ್ಯಾಸಕರ ವೇತನವನ್ನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಟ್ವೀಟ್ ಮಾಡಿ ಬೇಸರ ಹೊರ ಹಾಕಿರುವ ಸಿದ್ದರಾಮಯ್ಯ, ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸಿರುವ @BJP4Karnataka ಸರ್ಕಾರ, ಅವರ ಕಾರ್ಯಭಾರದ ಎಂಟು ಗಂಟೆಯ ಅವಧಿಯನ್ನು ಹಿಂದಿನಂತೆಯೇ ಉಳಿಸಬೇಕು ಮತ್ತು ಈಗಾಗಲೇ ನಿವೃತ್ತಿಗೆ ಸಮೀಪ ಇರುವ ಅತಿಥಿ ಉಪನ್ಯಾಸಕರೂ ಸೇರಿದಂತೆ ಎಲ್ಲರಿಗೂ ಸೇವಾ ಭದ್ರತೆಯನ್ನು ಒದಗಿಸಬೇಕು.

ಕಾರ್ಯಭಾರವನ್ನು ದುಪ್ಪಟ್ಟು ಗೊಳಿಸುವ ನಿರ್ಧಾರದಿಂದಾಗಿ ಸುಮಾರು 14-15 ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಹೊಸದಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿರುವುದು ಈ ಅನುಮಾನವನ್ನು ಬಲಪಡಿಸಿದೆ.

ಅತಿಥಿ ಉಪನ್ಯಾಸಕರ ಗೌರವಧನವನ್ನು ಹೆಚ್ಚಿಸುವ ಜೊತೆಯಲ್ಲಿ ಅವರ ತರಗತಿಗಳ ಅವಧಿಯನ್ನು ಹೆಚ್ಚಿಸಿರುವ @BJP4Karnataka ಸರ್ಕಾರ,
ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಮನೆಗೆ ಕಳಿಸಲು ಹೊರಟಿರುವುದು ಸ್ಪಷ್ಟವಾಗಿದೆ. ಇದು ನಿರಂತರ ಶೋಷಿತ ಅತಿಥಿ ಉಪನ್ಯಾಸಕರಿಗೆ ಬಗೆದಿರುವ ದ್ರೋಹವಾಗಿದೆ.

ಅತಿಥಿ ಉಪನ್ಯಾಸಕರ 8 ಗಂಟೆಯ ತರಗತಿಗಳಿಗೆ ನೀಡುತ್ತಿದ್ದ 11-12 ಸಾವಿರ ಗೌರವಧನವನ್ನ ರೂ.30-32 ಸಾವಿರಕ್ಕೆ ಹೆಚ್ಚಿಸಿರುವ @BJP4Karnataka ಸರ್ಕಾರ, ಅವರ ತರಗತಿಗಳ ಅವಧಿಯನ್ನು 8 ಗಂಟೆಯಿಂದ 16 ಗಂಟೆಗೆ ಹೆಚ್ಚಿಸಿ ಒಂದು ಕೈಯಲ್ಲಿ ಕೊಟ್ಟಿರುವುದನ್ನು ಇನ್ನೊಂದು ಕೈಯಿಂದ ಕಿತ್ತುಕೊಂಡಿದೆ.

ಗೌರವಧನ ಹೆಚ್ಚಿಸಿ, ಸೇವಾ ಸೌಲಭ್ಯ ಒದಗಿಸಿ ಅತಿಥಿ ಉಪನ್ಯಾಸಕರ ಬದುಕಿಗೆ ನೆರವಾಗಬೇಕಾಗಿದ್ದ @BJP4Karnataka ತನ್ನ ತಂತ್ರ-ಕುತಂತ್ರದ ಕ್ರಮಗಳ ಮೂಲಕ ಅವರ ಬದುಕನ್ನು ಇನ್ನಷ್ಟು ಅಭದ್ರಗೊಳಿಸಿ ವಿಶ್ವಾಸದ್ರೋಹ ಎಸಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!