ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಂದಂತ ಯೋಜನೆಯೇ ಗೃಹಲಕ್ಷ್ಮೀ ಯೋಜನೆ. ಇದರಿಂದ ಬರುವ ಹಣದಲ್ಲಿ ಅದೆಷ್ಟೋ ಬಡವರ ಮನೆಯ ಜೀವನ ನಡೆಯುತ್ತಿದೆ. ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಅಂತಲ್ಲ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯಿಂದಾನೂ ಇಂದು ಬಡವರು ನೆಮ್ಮದಿಯಾಗಿದ್ದಾರೆ. ಆದರೆ ಲೋಕಸಭಾ ಚುನಾವಣೆಯ ಹತ್ತಿರದಲ್ಲಿ ಗೃಹಲಕ್ಷ್ಮೀ ಹಣವೇ ಬಂದಿಲ್ಲ. ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬಾರದೆ, ಇನ್ನು ಬರುವುದೇ ಇಲ್ಲವೇನೋ ಎಂಬಂತೆ ಚಿಂತಿಸುತ್ತಿದ್ದಾರೆ. ಜೊತೆಗೆ ಗೃಹಲಕ್ಷ್ಮೀ ಯೋಜನೆಯಿಂದ ಹಲವರನ್ನು ಕೈ ಬಿಡಲಾಗುತ್ತಿದೆ.
ಇನ್ನು ಬಾಕಿ ಉಳಿದ ಹಣವನ್ನು ಇದೇ ತಿಂಗಳಲ್ಲಿ ಅಕೌಂಟಿಗೆ ಹಾಕಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ತಿಳಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಜೂನ್ ತಿಂಗಳ ಹಣ ಸ್ವಲ್ಪ ತಡವಾಗಿದೆ. ಇನ್ನೆರಡು ದಿನಗಳಲ್ಲಿ ಎರಡು ತಿಂಗಳ ಹಣ ಒಟ್ಟಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಇದರ ನಡುವೆ ಗೃಹಲಕ್ಷ್ಮೀ ಯೋಜನೆಯಲ್ಲಿ ಹಲವರನ್ನು ಬಿಡಲು ಸರ್ಕಾರ ನಿರ್ಧರಿಸಿದೆ. ಅದಕ್ಕೆ ಕಾರಣವೂ ಇದೆ. ಮಾರ್ಚ್ ನಂತರ ಹೊಸದಾಗಿ ಎರಡು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಆ ಅರ್ಜಿಗಳನ್ನು ಪರಿಗಣಿಸಲು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಲಕ್ಷಾಂತರ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಪತ್ತೆಯಾದ 1.78 ಮಂದಿ ಅನರ್ಹ ಫಲಾನುಭವಿಗಳಿಗೆ ಆದಾಯ ತೆರಿಗೆ ಪಾವತಿಸದ ದೃಢೀಕರಣ ಪತ್ರವನ್ನು ಕೇಳಲಾಗಿದೆ. ಆದರೆ ಸಲ್ಲಿಕೆಯಾಗಿರುವುದು 6 ಸಾವಿರ ಮಂದಿಯಿಂದ ಮಾತ್ರ. ಹೀಗಾಗಿ ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ಹಣ ಸಂದಾಯ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.