ಚಿತ್ರದುರ್ಗ, (ಫೆ.01) : ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿರುವುದು ಅತ್ಯಂತ ಸ್ವಾಗತರ್ಹ.
ಮೊದಲ ಬಾರಿಗೆ ರಾಜ್ಯದ ನೀರಾವರಿ ಯೋಜನೆ ಅನುದಾನ ಘೋಷಣೆ ಪ್ರಥಮ ಎಂಬುದು ಅತ್ಯಂತ ಸಂತಸದ ವಿಷಯ.
ಇದಕ್ಕಿಂತಲೂ ಮುಖ್ಯವಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು `ರಾಷ್ಟ್ರೀಯ ಯೋಜನೆ’ ಎಂಬ ಒಂದೇ ಸಾಲಿನ ಘೋಷಣೆ ಮಾಡಿದ್ದರೆ ಯೋಜನೆಯ ವೆಚ್ಚದಲ್ಲಿ ಶೇ.60ರಷ್ಟು ಬಿಡುಗಡೆ ಮಾಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿರುತ್ತಿತ್ತು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಕಡಿಮೆಯಾಗಿ, ಕಾಮಗಾರಿಗೆ ವೇಗ ನೀಡಲು ಹೆಚ್ಚು ಸಹಕಾರಿ ಆಗುತ್ತಿತ್ತು. ಈ ಕೆಲಸ ತುರ್ತು ಆಗಿ ಆಗಬೇಕಿದೆ.
ಮತ್ತು ಕೇಂದ್ರ ಸರ್ಕಾರ ಈಗ ಘೋಷಿಸಿರುವ 5300 ಕೋಟಿ ರೂ. ಅನುದಾನ ಬಿಡುಗಡೆಗೆ ಯಾವುದೇ ರೀತಿಯ ಷರತ್ತನ್ನು ರಾಜ್ಯ ಸರ್ಕಾರಕ್ಕೆ ವಿಧಿಸಬಾರದು ಮತ್ತು ಭದ್ರೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಇದರಿಂದ ಮಾತ್ರ ಬಯಲುಸೀಮೆ ಜನರ ಬವಣೆ ದೂರವಾಗಲು ಸಾಧ್ಯ. ಜೊತೆಗೆ ನೀರಾವರಿ ಹೋರಾಟ ಸಮಿತಿ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು, ರಾಜಕಾರಣಿಗಳ ಆಶಯ, ಒತ್ತಾಯ ಚಿತ್ರದುರ್ಗ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆ ಜಾರಿ ಆಗಬೇಕು ಎಂಬುದು.
ಆದರೆ, ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಿಂದ ಮೊಳಕಾಲ್ಮೂರು ತಾಲೂಕು ಸೇರಿ ಅನೇಕ ಹೋಬಳಿಗಳು ಕೈಬಿಟ್ಟಿ ಹೋಗಿವೆ. ಈ ಲೋಪ ಸರಿಪಡಿಸುವ ಮೂಲಕ ಜಿಲ್ಲೆಯನ್ನು ಸಂಪೂರ್ಣ ಹಸಿರನ್ನಾಗಿಸುವ ಹೊಣೆಗಾರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಇದೆ.
ಈ ನಿಟ್ಟಿನಲ್ಲಿ ಶೀಘ್ರ ಕ್ರಮೈಗೊಳ್ಳಬೇಕು ಎಂಬುದು ಹೋರಾಟ ಸಮಿತಿ ಒತ್ತಾಯ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ
ಡಾ. ಬಂಜಗೆರೆ ಜಯಪ್ರಕಾಶ್ ಅವರು ತಿಳಿಸಿದ್ದಾರೆ.