ಸುದ್ದಿಒನ್, ಚಳ್ಳಕೆರೆ : ನಾಯಕನಹಟ್ಟಿ ಕಾವಲು ಬಸವೇಶ್ವರ ನಗರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಪೋಷಕರು ಜಾನಪದ ಶೈಲಿಯಲ್ಲಿ ಎತ್ತಿನ ಗಾಡಿ ಅತ್ತಿಸಿಕೊಂಡು, ತಮಟೆ ವಾದ್ಯದ ಮೂಲಕ ಮೆರವಣಿಗೆ ಮಾಡಿಕೊಂಡು ಶಾಲೆಗೆ ಬರಮಾಡಿಕೊಂಡರು.
ರಾಜಕೀಯ ವ್ಯಕ್ತಿ ಗಳು, ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಅದ್ದೂರಿಯಾಗಿ ಹೂವಿನ ಹಾರಗಳನ್ನು ಹಾಕಿ. ಟ್ರಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಹತ್ತಿಸಿಕೊಂಡು, ತಮಟೆ, ವ್ಯಾದ್ಯಗಳ ಮೂಲಕ ಮೆರವಣಿಗೆ ಮಾಡಿರುವುದನ್ನು ನೋಡಿದ್ದೇವೆ. ಆದರೆ ತಾಲ್ಲೂಕಿನ ನಾಯಕನಹಟ್ಟಿ ಕಾವಲು ಬಸವೇಸ್ವರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡಿರುವುದು ವಿಶೇಷವಾಗಿತ್ತು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗಿರುವುರಿಂದ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವ ಸಲುವಾಗಿ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಿ ಬರಮಾಡಿಕೊಂಡಿರುವುದು ಸಹಜ, ಆದರೆ ನಾಯಕನಹಟ್ಟಿ ಸಮೀಪದ ಕಾವಲು ಬಸವೇಶ್ವರ ನಗರದಲ್ಲಿ ಅದ್ದೂರಿಯಾಗಿ ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಅದ್ದೂರಿಯಾಗಿ ಮೆರವಣಿಗೆ ಮಾಡಿಕೊಂಡು ಶಾಲೆಗೆ ಕರೆತಂದರು.
ಕೊರೋನಾ ಮಹಮಾರಿಯಿಂದ ಎರಡು ವರ್ಷಗಳಿಂದ ಶಾಲೆಗಳ ಮುಖ ನೋಡದ ಮಕ್ಕಳನ್ನು ಸೋಮವಾರ ಅದ್ದೂರಿಯಾಗಿ ಸ್ವಾಗತ ಮಾಡಿದರು.
ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು ಕೂಡ ಮಕ್ಕಳನ್ನು ವಿಶೇಷವಾಗಿ ಶಾಲೆಗಳಿಗೆ ಕಳಸಿಬೇಕು ಎನ್ನುವ ಸಲುವಾಗಿ ಎತ್ತಿನಗಾಡಿಗೆ ವಿವಿಧ ಬಣ್ಣ-ಬಣ್ಣದ ಹೂವಗಳಿಂದ, ಬಾಳೆ ಕಂದುಗಳಿಂದ, ಬಣ್ಣ ಬಣ್ಣ ಬಲೂನ್ ಗಳಿಂದ ಅಲಂಕಾರ ಮಾಡಿಕೊಂಡು, ಮಕ್ಕಳನ್ನಜ ಎತ್ತಿನಗಾಡಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಶಾಲೆಗೆ ಕರೆತಂದರು.
ಈ ವೇಳೆ ಶಾಲೆಯ ಶಿಕ್ಷಕರು ಮಕ್ಕಳಿಗೆ ಪೋಷಕರಿಗೆ ಸಹಿ ಹಂಚಿ ಮಾಡಿಕೊಂಡು ಶಾಲೆಗೆ ಬರಮಾಡಿಕೊಂಡರು.