ಚಿತ್ರದುರ್ಗ, (ಡಿಸೆಂಬರ್.03) : ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.
ಡಿಸೆಂಬರ್ 13 ರಿಂದ ಡಿಸೆಂಬರ್ 30 ರವರೆಗೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಡಿಸೆಂಬರ್ 13ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಡಿಸೆಂಬರ್ 17 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಡಿಸೆಂಬರ್ 18ರಂದು ನಾಮಪತ್ರಗಳ ಪರಿಶೀಲನೆ, ಡಿಸೆಂಬರ್ 20 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ.
ಮತದಾನ ಅವಶ್ಯವಿದ್ದರೆ ಡಿಸೆಂಬರ್ 27ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಸಲಾಗುವುದು. ಡಿಸೆಂಬರ್ 30ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯುವುದು. ಡಿಸೆಂಬರ್ 30ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಚುನಾವಣಾ ನಡೆಯುವ ಗ್ರಾಮ ಪಂಚಾಯಿತಿ ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ. ಚಳ್ಳಕೆರೆ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮ ವ್ಯಾಪ್ತಿಯ ದೊಡ್ಡ ಉಳ್ಳಾರ್ತಿ-1 ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ, ನಗರಂಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಟ್ಟೆಪ್ಪನಹಳ್ಳಿ ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ, ಪಗಡಲಬಂಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರವಿಗೊಂಡನಹಳ್ಳಿ-2 ಕ್ಷೇತ್ರದ (ಅನುಸೂಚಿತ ಜಾತಿ-ಮಹಿಳೆ) 1 ಸದಸ್ಯಸ್ಥಾನ, ಸಿದ್ದೇಶ್ವರನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದೇಶ್ವರನದುರ್ಗ-1 ಕ್ಷೇತ್ರದ (ಅನುಸೂಚಿತ ಜಾತಿ-ಮಹಿಳೆ) 1 ಸದಸ್ಯಸ್ಥಾನಕ್ಕೆ ಉಪಚುನಾವಣೆ ನಿಗಧಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಪುರ-1 ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ, ತುರುವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುರುವನೂರು-4 ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ, ತುರುವನೂರು-6 ಕ್ಷೇತ್ರದ (ಅನುಸೂಚಿತ ಜಾತಿ) 1 ಸದಸ್ಯಸ್ಥಾನ, ಬಂಗಾರಕ್ಕನಹಳ್ಳಿ ಕ್ಷೇತ್ರದ (ಸಾಮಾನ್ಯ-ಮಹಿಳೆ) 1 ಸದಸ್ಯಸ್ಥಾನ, ಬ್ಯಾಲಹಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಶಿವನಕೆರೆ ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ, ಜಾನುಕೊಂಡ ಗ್ರಾಮ ಪಂಚಾಯಿತಿವ್ಯಾಪ್ತಿಯ ಸೊಲ್ಲಾಪುರ ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನಕ್ಕೆ ಉಪಚುನಾವಣೆ ನಿಗಧಿಯಾಗಿದೆ.
ಹಿರಿಯೂರು ತಾಲ್ಲೂಕಿನ ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾಪುರ ಕ್ಷೇತ್ರದ (ಹಿಂದುಳಿದ ವರ್ಗ “ಬ”) 1 ಸದಸ್ಯಸ್ಥಾನ, ಹರ್ತಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ತಿಕೋಟೆ-1 ಕ್ಷೇತ್ರದ (ಹಿಂದುಳಿದ ವರ್ಗ “ಬ”) 1 ಸದಸ್ಯಸ್ಥಾನ, ಐಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರುಳಯ್ಯನಮಾಳಿಗೆ ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ, ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿವಾಲ ಫಾರಂ-1 ಕ್ಷೇತ್ರದ (ಸಾಮಾನ್ಯ)1 ಸದಸ್ಯಸ್ಥಾನ, ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಷಪ್ಪನಹಳ್ಳಿ ಕ್ಷೇತ್ರದ (ಹಿಂದುಳಿದ ವರ್ಗ “ಅ”-ಮಹಿಳೆ) ಕ್ಷೇತ್ರದ 1 ಸದಸ್ಯಸ್ಥಾನಕ್ಕೆ ಉಪಚುನಾವಣೆ ನಿಗಧಿಯಾಗಿದೆ.
ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಠಾಪುರ ಕ್ಷೇತ್ರದ (ಅನುಸೂಚಿತ ಜಾತಿ-ಮಹಿಳೆ) 1 ಸದಸ್ಯಸ್ಥಾನ, ಕೈನಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಪ್ಪನಹಳ್ಳಿ ಕ್ಷೇತ್ರದ (ಸಾಮಾನ್ಯ) 1 ಸದಸ್ಯಸ್ಥಾನ ಹಾಗೂ ಶ್ರೀರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೂಳಿಹಳ್ಳಿ ಕ್ಷೇತ್ರದ (ಸಾಮಾನ್ಯ) 1 ಸದಸ್ಯ ಸ್ಥಾನಕ್ಕೆ ಉಪಚುನಾಣೆ ನಿಗಧಿಯಾಗಿದ್ದು, ಚುನಾವಣೆ ನಡೆಸಲು ಅಗತ್ಯಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.