ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಈ ಐದು ಗ್ಯಾರಂಟಿಗಳಿಂದಾನೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಆ ಐದು ಗ್ಯಾರಂಟಿಗಳನ್ನು ರಾಜ್ಯಪಾಲರು ಹಾಡಿ ಹೊಗಳಿದ್ದಾರೆ.
ಇಂದು ನಡೆದ ಸದನದಲ್ಲಿ ರಾಜ್ಯಪಾಲರು ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಾರೆ. ಭವಿಷ್ಯದ ಅಭಿವೃದ್ಧಿ ಯೋಜನೆಗಳನ್ನ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ರು. ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಆಡಳಿತ ಮಾದರಿಯೊಂದನ್ನ ದೇಶಕ್ಕೆ ಪರಿಚಯಿಸಲಿದೆ ಎಂದಿದ್ದಾರೆ.
ಈ ಯೋಜನೆಗಳ ಅನುಷ್ಠಾನದಿಂದ ರಾಜ್ಯದ ಜನರ ಬದುಕು ಸುಧಾರಣೆ ಆಗಲಿದೆ ಎಂದ್ರು. ಅನ್ನಭಾಗ್ಯ ಯೋಜನೆಗೆ ಅಕ್ಕಿಯ ಕೊರತೆ ಒಪ್ಪಿಕೊಂಡ ಸರ್ಕಾರ, ಧನಭಾಗ್ಯ ಪ್ರಸ್ತಾಪಿಸಿದೆ. ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಸರ್ಕಾರ ಅಂತ ರಾಜ್ಯಪಾಲರು ತಿಳಿಸಿದ್ದಾರೆ.