Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಿ.ಎಸ್. ಮಂಜುನಾಥ್‍ ಅವರಿಗೆ ವಿಧಾನ ಪರಿಷತ್‍ ಸ್ಥಾನ ನೀಡಿ : ಎಸ್. ಜಯ್ಯಣ್ಣ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಮೇ. 26 : ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್‍ನಲ್ಲಿ ಎಡಗೈ ಸಮುದಾಯಕ್ಕೆ ಸ್ಥಾನ ನೀಡುವುದಾದರೆ ಚಿತ್ರದುರ್ಗದ ಜಿ.ಎಸ್. ಮಂಜುನಾಥ್‍ರವರನ್ನು ಪರಿಗಣಿಸುವಂತೆ ಕಾಂಗ್ರೆಸ್ ಮುಖಂಡರನ್ನು ಚಿತ್ರದುರ್ಗ ಎಸ್.ಸಿ. ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಸ್. ಜಯ್ಯಣ್ಣ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಹಲವಾರು ವರ್ಷಗಳ ಕಾಲ ಉತ್ತಮವಾದ ಸಂಘಟನೆಯನ್ನು ಮಾಡಿರುವ ಜಿ.ಎಸ್.ಮಂಜುನಾಥ್‍ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದರೆ ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೆ ರಾಜ್ಯ ಪೂರ್ತಿಯಾಗಿ ಸಹಾಯವಾಗಲಿದೆ ಇದ್ದಲ್ಲದೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‍ರವರು ಇವರ ಸಮರ್ಥವನ್ನು ಗುರುತಿಸಿ ರಾಜ್ಯ ಆಸಂಘಟಿತ ಕಾರ್ಮಿಕ ವಿಭಾಗಕ್ಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದೆ ರೀತಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವುದರ ಮೂಲಕ ರಾಜ್ಯದಲ್ಲಿ ಎಡಗೈ ಸಮುದಾಯವನ್ನು ಗುರುತಿಸಬೇಕಿದೆ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಎನ್.ಡಿ.ಕುಮಾರ್ ಮಾತನಾಡಿ, ಜಿ.ಎಸ್.ಮಂಜುನಾಥ್‍ರವರು ಹಲವಾರು ವರ್ಷಗಳ ಕಾಲ ಕಾಂಗ್ರೆಸ್‍ನಲ್ಲಿ ಸಕ್ರಿಯವಾಗಿ ಕಾರ್ಯಕರ್ತರಾಗಿ ಸೇವೆಯನ್ನು ಮಾಡಿದ್ದಾರೆ ಅಲ್ಲದೆ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನಿರ್ವಹಿಸಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ. ಇವರು ಪದವೀಧರರಾಗಿದ್ದು, ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದವರಾಗಿದ್ದಾರೆ. ವಿದ್ಯಾರ್ಥಿಯಿಂದಲೂ ಸಹಾ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್ ಮುಖಾಂತರ ಸುಮಾರು ಕಳೆದ 36 ವರ್ಷಗಳಿಂದಲೂ ಕಾಂಗ್ರೆಸ್‍ನಲ್ಲಿ ಸಕ್ರಿತವಾಗಿ ಇದ್ದಾರೆ.

ಎಲ್ಲಾ ಸಮಾಜದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ಇವರಿಗಿದೆ.  ಅತಿ ಹಿಂದುಳಿದ ಸೂಕ್ಷ್ಮ ಅತಿ ಸೂಕ್ಷ್ಮ ಜನಾಂಗದವನ್ನು ಗುರುತಿಸಿ ಅವರನ್ನು ಮೇಲೆತ್ತುವ ಜಾಣ್ಮೆ ಇದೆ ಜಿಲ್ಲೆಯಲ್ಲಿ ಯಾವುದೇ ಸಂಘಟನೆ ಬಂದರೂ ಸಹಾ ಜಿ.ಎಸ್.ಮಂಜುನಾಥ್ ರವರ ಹೆಸರು ಮುಂಚೂಣಿಯಲ್ಲಿರುತ್ತದೆ ಇದ್ದಾರೆ ಇವರಿಂದ ಕನಿಷ್ಠ 20,ಸಾವಿರಕ್ಕೂ ಹೆಚ್ಚು ಕುಟುಂಬಗಳು ನಿಮ್ಮದಿಯ ಜೀವನವನ್ನು ನಡೆಸುತ್ತಿವೆ. ಅವರ ಜೀವನಕ್ಕೆ ಭದ್ರತೆಯನ್ನು ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಈಗಲೂ ಸಹಾ ಅವರು ಅಭೀಮಾನಿ ಬಳಗವನ್ನು ಹೊಂದಿದ್ದು ಅವರಿಂದ ಸಮಾಜ ಸೇವೆಯ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಗೋಷ್ಟಿಯಲ್ಲಿ ಚಿತ್ರದುರ್ಗ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರಾದ ,ಓಹನ್ ಪೂಜಾರಿ, ರವಿಕುಮಾರ್, ಆಸೋಕ ನಾಯ್ಡ, ಆಶ್ವಿಮ್ ಕುಮಾರ್, ಸುನೀಲ್ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

30 ವರ್ಷದಿಂದ ಸೀರೆಯನ್ನೇ ತೆಗೆದುಕೊಳ್ತಿಲ್ಲ : ಸರಳತೆಯಿಂದಾನೇ ಮತ್ತೆ ಮನಸ್ಸು ಗೆದ್ದ ಸುಧಾಮೂರ್ತಿ, ಹೇಳಿದ್ದೇನು..?

ಬೆಂಗಳೂರು: ಸುಧಾಮೂರ್ತಿ ಅಂದ್ರೆ ಸರಳತೆಯಿಂದಾನೇ ಯುವಕರಿಗೆ ಸ್ಪೂರ್ತಿಯಾದವರು. ಅವರ ನಡವಳಿಕೆ, ಅವರ ಮಾತುಗಳು ಎಲ್ಲರನ್ನು ಆಕರ್ಷಿಸುತ್ತದೆ. ಕೋಟ್ಯಾಧೀಶ್ವರರೇ ಆದರು ಸಿಂಪಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಇದೀಗ ಕಳೆದ 30 ವರ್ಷದಿಂದ ಸೀರೆಯನ್ನೇ ಕೊಂಡುಕೊಂಡಿಲ್ಲ

ಇತಿಹಾಸ ನಿರ್ಮಿಸಿದ ಬಜಾಜ್; ವಿಶ್ವದ ಮೊದಲ CNG ಬೈಕ್ ಬಿಡುಗಡೆ ಮಾಡಿದ ಭಾರತೀಯ ಕಂಪನಿ; ಮೈಲೇಜ್ ಕೂಡ ಸೂಪರ್

• ಹಲವು ವರ್ಷಗಳಿಂದ ಸುದ್ದಿಯಲ್ಲಿದ್ದ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಬಿಡುಗಡೆಗೆ ಕೊನೆಗೂ ತೆರೆ ಬಿದ್ದಿದೆ. ಭಾರತೀಯ ಆಟೋಮೊಬೈಲ್ ಕಂಪನಿ ಬಜಾಜ್ ಶುಕ್ರವಾರ ವಿಶ್ವದ ಮೊದಲ ಸಿಎನ್‌ಜಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಈ

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ | ಅದ್ದೂರಿಯಾಗಿ ನೆರವೇರಿದ ಮೊದಲ ದಿನದ ಕಾರ್ಯಕ್ರಮ

ಸುದ್ದಿಒನ್, ಚಿತ್ರದುರ್ಗ, ಜುಲೈ.05 :ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವ ಅಂಗವಾಗಿ ಮೊದಲ ದಿನವಾದ ಇಂದು ಸಂಜೆ ಕೇರಳದ ತಂತ್ರಿಗಳಾದ ವಿಷ್ಣು ಭಟ್ಟಾದ್ರಿ ಪಾಡ್ ಹಾಗೂ ದೇವಸ್ಥಾನದ

error: Content is protected !!