ಹಸಿಮೆಣಸಿನಕಾಯಿ ಅಂದ್ರೆ ಸಾಕಷ್ಟು ಜನರಿಗೆ ಇಷ್ಟ, ತಿಂದ್ರೆ ಕಷ್ಟ. ಸ್ವಲ್ಪ ತಿಂದ್ರು ಅಥವಾ ಅದರ ಘಮಲು ಸ್ವಲ್ಪೇ ಸ್ವಲ್ಪ ಇದ್ರು ಕೂಡ ಕೆಲವರಿಗೆ ಗ್ಯಾಸ್ಟ್ರಿಕ್ ಆಗಿ ಬಿಡುತ್ತೆ. ಅಂತವರಿಗೆ ಸ್ವಲ್ಪ ಕಷ್ಟವೇ ಸರಿ.
ಇನ್ನು ಗ್ಯಾಸ್ಟ್ರಿಕ್ ಸಮಸ್ಯೆ ಇದ್ರು ಕೂಡ ಹಸಿಮೆಣಸಿನಕಾಯಿ ಮೇಲಿನ ಮೋಹವನ್ನ ಹಲವರು ಬಿಡಲ್ಲ. ಯಾಕಂದ್ರೆ ಹಸಿ ಮೆಣಸಿನಕಾಯಿಯ ಟೇಸ್ಟ್ ಬೇರೆಯದ್ದೆ ಆಗಿರುತ್ತೆ. ಎಲ್ಲಾ ಅಡುಗೆಗೂ ಹಸಿಮೆಣಸಿನಕಾಯಿಯನ್ನೇ ಹಾಕೋದಕ್ಕೆ ಆಗಲ್ಲ, ಹಾಗೇ ಹಸಿಮೆಣಸಿನಕಾಯಿ ಜಾಗಕ್ಕೆ ಒಣ ಮೆಣಸಿನಕಾಯಿಯನ್ನು ಹಾಕೋದಕ್ಕೆ ಆಗಲ್ಕ. ಅಂತವರಿಗಾಗಿ ಇಲ್ಲೊಂದಿಷ್ಟು ಟಿಪ್ಸ್ ಇದೆ.
ಹಸಿ ಮೆಣಸಿನಕಾಯಿ ಮೇಲೆ ಮೋಹವೂ ಹೌದು, ಆರೋಗ್ಯಕ್ಕೆ ಆಗೋದಿಲ್ಲ ಅನ್ನೋ ಸಮಸ್ಯೆ ಇರುವವವರು ಹೌದು, ಅಂತವರಿಗಾಗಿ ಒಂದಷ್ಟು ಟಿಪ್ಸ್ ನೀಡ್ತೇವೆ ಅದನ್ನ ಫಾಲೋ ಮಾಡಿದ್ರೆ ಖಂಡಿತ ಹಸಿ ಮೆಣಸಿನಕಾಯಿಯನ್ನ ಯಾವುದೇ ಭಯವಿಲ್ಲದೆ, ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾಡದೆ ತಿನ್ನಬಹುದು.
ಅರ್ಧ ಕೆಜಿ ಹಸಿಮೆಣಸಿನಕಾಯಿಯನ್ನು ಒಂದು ಲೀಟರ್ ಕುದಿಯುವ ನೀರಿಗೆ ಹಾಕಿ ಸ್ಟವ್ ಆಫ್ ಮಾಡಿ. ಬೇಕಾದರೆ ಸ್ವಲ್ಪ ಅರಿಶಿನವನ್ನು ಅದಕ್ಕೆ ಸೇರಿಸಬಹುದು.
ಎರಡು ನಿಮಿಷಗಳ ನಂತರ ನೀರನ್ನೆಲ್ಲ ಬಸಿದು ಆ ಮೆಣಸಿನಕಾಯಿಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳಿ. ಆ ಮೆಣಸಿನಕಾಯಿಯನ್ನು ಆಹಾರದಲ್ಲಿ ಬಳಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ.