ಮೈಸೂರು: ಸದ್ಯ ಜಿ ಟಿ ದೇವೇಗೌಡ ಜಿಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಇದೆ. ಆ ಬಗ್ಗೆ ಅವರೇ ಮಾತನಾಡಿದ್ದು, ನನ್ನ ಮಗನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿರ್ಧಾರ ತಿಳಿಸಲಿ. ನಂತರದಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ನಾನು ತೀರ್ಮಾನ ಮಾಡುತ್ತೇನೆ. ಟಿಕೆಟ್ ಬಗ್ಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ಹೇಳಿರುವೆ.
ನನ್ನ ಪುತ್ರನಿಗೆ ಟಿಕೆಟ್ ನೀಡಬೇಕು. ಅದರಲ್ಲಿ ಹುಣಸೂರು ಮೊದಲ ಆದ್ಯತೆ, ಕೆ ಆರ್ ನಗರ ಎರಡನೇಯದು, ಚಾಮರಾಜ ಕ್ಷೇತ್ರ ಮೂರನೇ ಆಯ್ಕೆಯಾಗಿದೆ. ಈ ಮೂರು ಕ್ಷೇತ್ರಗಳ ಪೈಕಿ ಯಾವುದರಲ್ಲಾದರೂ ಟಿಕೆಟ್ ನೀಡಲಿ.
ನಾನು ಮಾತ್ರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೇನೆ. ಈ ಮಧ್ಯೆ ನಮ್ಮ ಜೊತೆಗೆ ಇರಿ ಎಂದು ಬಿಜೆಪಿ ನಾಯಕರು ಸಹ ಕೇಳಿದ್ದಾರೆ. ನನಗೆ ಮತ್ತು ನನ್ನ ಮಗನಿಗೆ ಇಬ್ಬರಿಗೂ ಟಿಕೆಟ್ ನೀಡುವುದಾಗಿ ಬಿಜೆಪಿ ನಾಯಕರು ಹೇಳಿದ್ದಾರೆ. ಸದ್ಯಕ್ಕೆ ನಾನು ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆರು ತಿಂಗಳ ಬಳಿಕ ನಿರ್ಧರಿಸುತ್ತೇನೆ ಎಂದಿದ್ದಾರೆ.
ಇನ್ನು ನನ್ನ ಜೊತೆ ಯಾವ ಜೆಡಿಎಸ್ ನಾಯಕರು ಸಂಪರ್ಕದಲ್ಲಿಲ್ಲ. ಹೆಚ್ಡಿಕೆ ಸಿಎಂ ಸ್ಥಾನದಿಂದ ಕೆಳಗಿಳಿದಾಗಿನಿಂದಲೂ ಸಂಪರ್ಕದಲ್ಲಿಲ್ಲ. ಜೆಡಿಎಸ್ ನ ಯಾವ ಸಭೆ, ಸಮಾರಂಭಕ್ಕೂ ನನ್ನನ್ನು ಕರೆಯುತ್ತಿಲ್ಲ ಎಂದಿದ್ದಾರೆ.