Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೀಲಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಯ್ಯಪ್ಪ ಸ್ವಾಮಿಗೆ ಬಂಗಾರದ ಆಭರಣ‌ ಸಲ್ಲಿಸಿದ ಜಿ.ರಘು ಆಚಾರ್

Facebook
Twitter
Telegram
WhatsApp

ಚಿತ್ರದುರ್ಗ;(ಜ.14): ಜಿ.ರಘು ಆಚಾರ್ ಇಂದಿನಿಂದ ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಪತ್ನಿ ಆಶಾ ಹಾಗು ಪುತ್ರ ಹರ್ಷವರ್ಧನ್ ಜೊತೆಯಾಗಿ ಮೊದಲಿಗೆ ನೀಲಕಂಠೇಶ್ವರ ದೇವಸ್ಥಾನಕ್ಕೆ ಆಗಮಿಸಿದ ರಘು ಆಚಾರ್, ನೀಲಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ನಂತರ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ಸುಮಾರು 55 ಗ್ರಾಂ ತೂಕದ ಬಂಗಾರದ ಆಭರಣ ಸಮರ್ಪಿಸಿ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಚಿತ್ರದುರ್ಗದಲ್ಲಿ ಮೊದಲಿಗೆ ನೀಲಕಂಠೇಶ್ವರನಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸುವುದು ವಾಡಿಕೆಯಾಗಿದೆ. ಅಂತೆಯೇ ನಾನೂ ಕೂಡ ಇಂದು ಪತ್ನಿ ಹಾಗು ಪುತ್ರನ ಜೊತೆ ನೀಲಕಂಠೇಶ್ವರನಿಗೆ ಪೂಜೆ ಸಲ್ಲಿಸಿದ್ದೇನೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೀಸಲು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 16 ಜನ ಆಕಾಂಕ್ಷಿಗಳಿದ್ದಾರೆ.

ಎಲ್ಲರೂ ಒಟ್ಟಾಗಿ ಪಕ್ಷದ ಪರ ಪ್ರಚಾರ ಮಾಡುತ್ತೇವೆ, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲಾ ಒಟ್ಟಾಗಿ ಸೇರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಸುಮಾರು 45 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

High Blood Pressure : ಅಧಿಕ ರಕ್ತದೊತ್ತಡ ಎಷ್ಟು ಅಪಾಯಕಾರಿ ಗೊತ್ತಾ ?

ಸುದ್ದಿಒನ್ : ಅಧಿಕ ರಕ್ತದೊತ್ತಡ ಎನ್ನುವುದು ಒಂದು ರೀತಿಯ ಸೈಲೆಂಟ್ ಕಿಲ್ಲರ್ ಇದ್ದಂತೆ. ಈ ಸಮಸ್ಯೆ ಇದ್ದರೆ ಪ್ರತಿದಿನ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಳ್ಳಬೇಕು. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು?

ಈ ರಾಶಿಯವರು ಏನೇ ಪ್ರಯತ್ನಿಸಿದರು ಸೋಲುಗಳ ಮೇಲೆ ಸೋಲು ಏಕೆ? ಇದಕ್ಕೆಲ್ಲ ಕಾರಣವೇನು? ಮಂಗಳವಾರ ರಾಶಿ ಭವಿಷ್ಯ -ಮೇ-21,2024 ನರಸಿಂಹ ಜಯಂತಿ ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

error: Content is protected !!