ಲೋಕಸಭಾ ಚುನಾವಣೆಯ ಕಾವು ಈಗಾಗಲೇ ದೇಶದೆಲ್ಲೆಡೆ ಹಬ್ಬಿದೆ. ನಾಳೆಯಿಂದ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಲಿದೆ. ಒಟ್ಟು 7 ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಕ್ಷೇತ್ರಗಳಿಗೆ ಇಂದು ಮನೆಮನೆ ಪ್ರಚಾರಕ್ಕೆ ಕೊನೆಯಾಗಲಿದೆ. ನಿನ್ನೆ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಹಿನ್ನಲೆ ಇಂದು ಮನೆ ಮನೆ ಪ್ರಚಾರಕ್ಕೆ ತೆರೆ ಬಿದ್ದಿದೆ.
ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ. ಮೊದಲ ಹಂತದಲ್ಲಿ ಚುನಾವಣೆ ಎದುರಿಸಲಿರುವ ರಾಜ್ಯಗಳು ಈ ಕೆಳಕಂಡಂತಿವೆ.
ತಮಿಳುನಾಡಿನ 39 ಕ್ಷೇತ್ರಗಳು
ರಾಜಸ್ಥಾನದ 12 ಕ್ಷೇತ್ರಗಳು
ಉತ್ತರ ಪ್ರದೇಶದ 8 ಕ್ಷೇತ್ರಗಳು
ಮಧ್ಯ ಪ್ರದೇಶದ 6 ಕ್ಷೇತ್ರಗಳು
ಉತ್ತರಾಖಂಡದ 5 ಕ್ಷೇತ್ರಗಳು
ಮಹಾರಾಷ್ಟ್ರದ 5 ಕ್ಷೇತ್ರಗಳು
ಅಸ್ಸಾಂ ನ 5 ಕ್ಷೇತ್ರಗಳು
ಬಿಹಾರದ 4 ಕ್ಷೇತ್ರಗಳು
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರ 2 ಕ್ಷೇತ್ರಗಳು
ಅರುಣಾಚಲ ಪ್ರದೇಶ 2 ,
ಮೇಘಾಲಯ 2 ಕ್ಷೇತ್ರಗಳು
ಪುದುಚೆರಿ, ಅರುಣಾಚಲ ಪ್ರದೇಶ, ಛತ್ತೀಸ್‌ಘಡ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್,
ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇನ್ನು ಕರ್ನಾಟಕದ 28 ಕ್ಷೇತ್ರಗಳಿಗೂ ಎರಡು ಹಂತದ ಮತದಾನ ನಡೆಯಲಿದೆ. ಅದರಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ಹಾಗೂ ಎರಡನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಸಿಗಲಿದೆ. ಹೊಸ ಪ್ರಧಾನಿಯನ್ನು ಜನ ನೋಡಲಿದ್ದಾರೆ.