Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೈತ ಮುಖಂಡ ಟಿ.ನುಲೇನೂರು ಶಂರಪ್ಪನವರಿಗೆ ಭಾವಪೂರ್ಣ ವಿದಾಯ : ನುಡಿ ನಮನ ಸಲ್ಲಿಸಿದ ಪ್ರಮುಖರು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ನವೆಂಬರ್.22 : ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ನೀರಾವರಿಗಾಗಿ ನಡೆದ ಹೋರಾಟದಲ್ಲಿ ಟಿ.ನುಲೇನೂರು ಶಂರಪ್ಪನವರು ಪ್ರಮುಖರು ಎಂದು ರೈತ ನಾಯಕ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪಗಡಲಬಂಡೆ ನಾಗೇಂದ್ರ ಸ್ಮರಿಸಿಕೊಂಡರು.

ಮಂಗಳವಾರ ನಿಧನರಾದ ರೈತ ಹೋರಾಟಗಾರ ಟಿ.ನುಲೇನೂರು ಶಂಕರಪ್ಪನವರ ಪಾರ್ಥಿವ ಶರೀರವನ್ನು ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ಸಾರ್ವಜನಿಕರ ದರ್ಶನಕ್ಕೆ ಇಟ್ಟಾಗ ಜಿಲ್ಲಾ ನೀರಾವರಿ ಹೋರಾಟ ಅನುಷ್ಟಾನ ಸಮಿತಿಯಿಂದ ನಡೆದ ನುಡಿನಮನದಲ್ಲಿ ಮಾತನಾಡಿದರು.

ವೈಚಾರಿಕ, ಸೈದ್ದಾಂತಿಕವಾಗಿ ಗಟ್ಟಿ ನಿಲುವು ತಾಳುತ್ತಿದ್ದ ಟಿ.ನುಲೇನೂರು ಶಂಕರಪ್ಪನವರು ರೈತ ಸಂಘಕ್ಕೆ ಎಲ್ಲಿಯೂ ಚ್ಯುತಿ ತರಲಿಲ್ಲ. ಬದ್ದತೆಯಿಂದ ರೈತರ ಸಮಸ್ಯೆಗಳ ನಿವಾರಣೆಗೆ ಹೋರಾಡುತ್ತಿದ್ದರು. ಜಾತ್ಯತೀತವಾಗಿ ಕೆಲಸ ಮಾಡಿದ ಅವರ ನಿಧನ ರೈತ ಸಮುದಾಯಕ್ಕಷ್ಟೆ ಅಲ್ಲ. ಅನೇಕ ಸಂಘಟನೆಗಳಿಗೆ ನಷ್ಟವಾಗಿದೆ. ಕೆಲವರು ಬದುಕಿದ್ದು ಸತ್ತಂತೆ ಇರುತ್ತಾರೆ. ಆದರೆ ನುಲೇನೂರು ಶಂಕರಪ್ಪನವರು ಸತ್ತ ಮೇಲೆ ಬದುಕುವ ವ್ಯಕ್ತಿತ್ವದವರು ಎಂದು ಗುಣಗಾನ ಮಾಡಿದರು.

ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ಟಿ.ನುಲೇನೂರು ಶಂರಪ್ಪನವರು ರೈತ ಪರವಾದ ಹೋರಾಟವನ್ನೆ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದರು. ಎಂತಹ ಕಠಿಣ ಸಂದರ್ಭ ಎದುರಾದರೂ ಸಂಘರ್ಷದ ಹಾದಿಯನ್ನು ಎಂದಿಗೂ ಹಿಡಿಯಲಿಲ್ಲ. ಅವರ ಹೋರಾಟದ ನಡೆ ಇತರೆಯವರಿಗೆ ಅನುಕರಣೀಯ. ರೈತ ಸಂಘದಲ್ಲಿ ಅನೇಕ ಗುಂಪುಗಳಿದ್ದರು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದರು. ಹೋರಾಟದ ಕೊಂಡಿ ಈಗ ಕಳಚಿದೆ ಎಂದು ದುಃಖ ತೋಡಿಕೊಂಡರು.

ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ ಯೋಜನೆಗೆ ತಾರ್ಕಿಕ ಅಂತ್ಯ ಕಾಣುವ ಈ ಸಂದರ್ಭದಲ್ಲಿ ಟಿ.ನುಲೇನೂರು ಶಂಕರಪ್ಪನವರು ನಮ್ಮ ಜೊತೆ ಇರಬೇಕಿತ್ತು. ನೀರಾವರಿಗೆ ಸಂಬಂಧಿಸಿದಂತೆ ಅಜ್ಜಂಪುರ ಬಳಿ ಚಿಕ್ಕ ಸಮಸ್ಯೆಯಿದೆ. ಬಗೆಹರಿಸಿದರೆ ನಿಜವಾಗಿಯೂ ಅವರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ ಎಂದು ನುಡಿನಮನದಲ್ಲಿದ್ದ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರು.

ನಿವೃತ್ತ ಪ್ರಾಚಾರ್ಯರಾದ ಸಿ.ಶಿವಲಿಂಗಪ್ಪ ಮಾತನಾಡುತ್ತ ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದ ಟಿ.ನುಲೇನೂರು ಶಂಕರಪ್ಪ ಜೀವನವಿಡಿ ಹೋರಾಟ ಮಾಡಿಕೊಂಡು ಬಂದರು. ಚಿತ್ರದುರ್ಗ ನಗರದಲ್ಲಿ ಯಾವುದಾದರೂ ಒಂದು ವೃತ್ತಕ್ಕೆ ಶಂಕರಪ್ಪನವರ ಹೆಸರಿಡುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಗಾಗಿ ರಾಂಪುರದಿಂದ ನಡೆದ ಹೋರಾಟದಲ್ಲಿ ಒಂಬತ್ತು ದಿನಗಳ ಕಾಲ ಪಾದಯಾತ್ರೆಯಲ್ಲಿ ಟಿ.ನುಲೇನೂರು ಶಂಕರಪ್ಪ ಭಾಗಿಯಾಗಿ ಜಿಲ್ಲೆಯ ಮೇಲಿರುವ ಕಾಳಜಿಯನ್ನು ತೋರ್ಪಡಿಸಿದರು. ಆಳುವ ಸರ್ಕಾರಗಳಿಗೆ ಬಿಸಿ ಮುಟ್ಟಿಸುವ ಹೋರಾಟ ಅವರದಾಗಿತ್ತು. ಯಾರೊಂದಿಗೂ ಮನಸ್ತಾಪ ಮಾಡಿಕೊಂಡವರಲ್ಲ. ವಿದ್ಯುತ್ ಸಮಸ್ಯೆ, ಬೆಳೆವಿಮೆ, ಬೆಳೆನಷ್ಟ ಪರಿಹಾರ ಹೀಗೆ ರೈತರ ಒಂದಲ್ಲ ಒಂದು ಸಮಸ್ಯೆಗಳಿಗೆ ಸದಾ ಧ್ವನಿಯಾಗಿರುತ್ತಿದ್ದರು ಎಂದು ನೆನಪಿಸಿಕೊಂಡರು.

ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡುತ್ತ ನಾಲ್ಕುವರೆ ದಶಕಗಳಿಂದ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಟಿ.ನುಲೇನೂರು ಶಂಕರಪ್ಪ ಜಿಲ್ಲೆಯ ಅಭಿವೃದ್ದಿಗೆ ಹೋರಾಟದ ಶಕ್ತಿಯಾಗಿ ನಿಂತಿದ್ದರೆಂದು ಗುಣಗಾನ ಮಾಡಿದರು.

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ಕಾವೇರಿ, ಮಹಾದಾಯಿ, ಭದ್ರಾಮೇಲ್ದಂಡೆ ಹೋರಾಟದಲ್ಲಿ ಟಿ.ನುಲೇನೂರು ಶಂಕರಪ್ಪನವರು ಮುಂಚೂಣಿಯಲ್ಲಿದ್ದರು. ರೈತರು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಕೋಲ್ಡ್ ಸ್ಟೋರೇಜ್ ಆಗಬೇಕೆಂಬ ಕನಸು ಕಂಡಿದ್ದರು. ಅದು ಈಡೇರಬೇಕೆಂದು ಜಿಲ್ಲಾಡಳಿತಕ್ಕೆ ವಿನಂತಿಸಿದರು.

ರೈತ ಮುಖಂಡರುಗಳಾದ ಚಾಮರಸ ಮಾಲಿ ಪಾಟೀಲ್, ಪೂಣಚ್ಚ, ಗೋವಿಂದಪ್ಪ, ಮಂಜುಳ ಅಕ್ಕಿ, ಅರುಣ್ ಕುರುಡಿ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಎಂ.ಸಿದ್ದಪ್ಪ, ನಾಗರಾಜ್ ಮುದ್ದಾಪುರ, ಹೊರಕೇರಪ್ಪ, ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ನಿವೃತ್ತ ಉಪನ್ಯಾಸಕ ಅಶೋಕ್‍ಕುಮಾರ್ ಸಂಗೇನಹಳ್ಳಿ, ಕಾರ್ಮಿಕ ಮುಖಂಡ ಕಾಂ.ಜಿ.ಸಿ.ಸುರೇಶ್‍ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಮೂರ್ತಿ, ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ ಸೇರಿದಂತೆ ಇನ್ನು ಅನೇಕರು ನುಡಿನಮನದಲ್ಲಿ ಭಾಗವಹಿಸಿ ಅಂತಿಮ ದರ್ಶನ ಪಡೆದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

error: Content is protected !!