ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಹಿರಿಯ ನಟ ದ್ವಾರಕೀಶ್ ಅವರು ನಿನ್ನೆ ನಿಧನ ಹೊಂದಿದ್ದಾರೆ. ಇಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಟ ಯಶ್ ಇಂದು ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಹಿರಿಯ ನಟನಿಗೆ ನಮನ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ನಟ ಯಶ್, ಪ್ರಪಂಚದಲ್ಲಿ ತುಂಬಾ ಜನ ಹುಟ್ಟುತ್ತಾರೆ, ತುಂಬಾ ಜನ ಸಾಯುತ್ತಾರೆ. ಬದು ಎಂಬುದು ಒಂದು ಅವಕಾಶ. ಆ ಅವಕಾಶದಲ್ಲಿ ನೀವೆಷ್ಟು ಧೈರ್ಯ ಮಾಡುತ್ತೀರಾ, ಏನು ಸಾಧಿಸುತ್ತೀರಾ, ಯಾವ ಮಟ್ಟಕ್ಕೆ ಬದುಕನ್ನು ರೂಪಿಸಿಕೊಳ್ಳುತ್ತೀರಾ ಎಂಬುದು ಬಹಳ ಮುಖ್ಯ. ಅದಕ್ಕೆ ಉತ್ತಮ ಉದಾಹರಣೆ ದ್ವಾರಕೀಶ್ ಅವರು. ಸಿನಿಮಾಗೆ ಹೀರೋ ಆಗೋಕೆ ಹೀಗೆ ಇರಬೇಕು, ಹಾಗೇ ಇರಬೇಕು ಎಂಬ ನಾರ್ಮ್ಸ್ ಇರುತ್ತಲ್ಲ ಅದನ್ನೆಲ್ಲ ಹೊಡೆದು ದ್ವಾರತಾವರು ತಮ್ಮದೇ ಆದಂತ ಸಾಧನೆ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದು.
ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾದಂತದ್ದು. ಅವರನ್ನು ನೋಡಿದಾಗ ತುಂಬಾ ಸ್ಪೂರ್ತಿಯಾಗುತ್ತೆ. ಅವರನ್ನ ನಾವೆಲ್ಲ ಖುಷಿಯಿಂದ ಕಳುಹಿಸಿಕೊಡಬೇಕು ಎಂದು ಯಶ್ ಹೇಳಿದ್ದಾರೆ. ಚಿತ್ರರಂಗದ ಗಣ್ಯರೆಲ್ಲ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿ, ವಿದಾಯ ಹೇಳಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಬೇಡಿಕೊಂಡಿದ್ದಾರೆ.