ಗದಗ: ಇತ್ತೀಚೆಗೆ ದಿಂಗಾಲೇಶ್ವರ ಶ್ರೀಗಳು ಅತಿ ಹೆಚ್ಚು ಚರ್ಚೆಯಲ್ಲಿದ್ದಾರೆ. ಕಮಿಷನ್ ವಿಚಾರವಾಗಿ ಮಠದ ಅನುದಾನಕ್ಕೂ ಕಮಿಷನ್ ನೀಡಬೇಕು ಎಂಬ ಹೇಳಿಕೆ ನೀಡಿದ್ದರು. ಇದೀಗ ಸ್ವಾಮೀಜಿಗಳ ಭಕ್ತರು ಸಚಿವ ಸಿಸಿ ಪಾಟೀಲ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು ಬಿಗಿಭದ್ರತೆ ನೀಡಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿಗಳ ಪೂರ್ವಾಶ್ರಮದ ಬಗ್ಗೆ ಸಚಿವ ಸಿಸಿ ಪಾಟೀಲ್ ಅವಹೇಳನವಾಗಿ ಮಾತನಾಡಿದ್ದರು. ಈ ವಿಚಾರವಾಗಿ ವಿವರಣೆ ನೀಡಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ವುವರಣೆ ನೀಡದ ಕಾರಣ ಇಂದು ಸಚಿವ ಸಿಸಿ ಪಾಟೀಲ್ ನಿವಾಸದೆದುರು ದಿಂಗಾಲೇಶ್ಚರ ಭಕ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ನರಗುಂದ ಪಟ್ಟಣದತ್ತ ಶ್ರೀಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇನ್ನು ದಿಂಗಾಲೇಶ್ವರ ಶ್ರೀಗಳನ್ನು ತಡೆಯಲು ಪೊಲೀಸರು ಬಿಗಿಭದ್ರತೆ ಒದಗಿಸಿದ್ದಾರೆ.
ಕಲಕೇರಿ, ಕುರ್ಲಕೇರಿ, ಅಳಗವಾಡಿ ಗ್ರಾಮಗಳ ಸಮೀಪ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ, ಸಚುವರ ಮನೆ ಸುತ್ತ ಭದ್ರತೆ ಒದಗಿಸಿದ್ದಾರೆ. ಅಲ್ಲಲ್ಲಿ ಹೆಚ್ಚೆಚ್ಚು ಬ್ಯಾರಿಕೇಡ್ ಗಳನ್ನು ಅಳವಡಿಸಿ, ಶ್ರೀಗಳನ್ನು ತಡೆಯಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಇನ್ನು ನರಗುಂದಕ್ಕೆ ಬರುವ ಮುನ್ನವೇ ಶ್ರೀಗಳ ಭಕ್ತರನ್ನು ಮುಳಗುಮನದ ಪಟ್ಟಣದಲ್ಲಿಯೇ ತಡೆಯುತ್ತಿದ್ದಾರೆ. ಬಿಜೆಪಿ ಧ್ವಜ ಕಟ್ಟಿದ ವಾಹನಗಳನ್ನು ಮಾತ್ರವೇ ಒಳಗೆ ಬಿಡುತ್ತಿದ್ದಾರೆ. ಪೊಲೀಸರ ಈ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.