ವಿಜಯಪುರ: ಬಿಜೆಪಿಯಲ್ಲಿ ಫೈರ್ ಬ್ರ್ಯಾಂಡ್ ಅಂತಾನೇ ಗುರುತಿಸಿಕೊಂಡಿರುವವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ತಮ್ಮ ಪಕ್ಷದವರ ಬಗ್ಗೆಯೇ ಆಗಾಗ ಗರಂ ಆಗುತ್ತಿರುತ್ತಾರೆ. ಅದರಲ್ಲೂ ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬದ ಮೇಲೆ ವಾಗ್ದಾಳಿ ನಡೆಸುತ್ತಲೆ ಇರುತ್ತಾರೆ. ಇದೀಗ ಫೈಯರ್ ಬ್ರಾಂಡ್ ಗೆ ಸಂಕಷ್ಟ ಎದುರಾಗಿದೆ. ಅವರ ಕಾರ್ಖಾನೆಯಿಂದಾಗಿಯೇ ಸಂಕಷ್ಟ ಶುರುವಾಗಿದೆ.
ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲಿ ಸಿದ್ಧಸಿರಿ ಎಂಬ ಸಕ್ಕರೆ ಕಾರ್ಖಾನೆಯಿದೆ. ಮೂಲಗಳ ಪ್ರಕಾರ ಈ ಕಾರ್ಖಾನೆಯ ಮಾಲೀಕರು ಬಸನಗೌಡ ಪಾಟೀಲ್ ಯತ್ನಾಳ್ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಕಾರ್ಖಾನೆಯ ವಿಚಾರಕ್ಕೆ24 ಗಂಟೆಯಲ್ಲಿ ಉತ್ತರಿಸಬೇಕೆಂದು ಇಲಾಖೆಯೂ ನೋಟೀಸ್ ನೀಡಿದೆ.
ಕಬ್ಬು ಇಲಾಖೆ ಹಾಗೂ ಸಕ್ಕರೆ ಇಲಾಖೆಯೂ ಈ ನೋಟೀಸ್ ಜಾರಿ ಮಾಡಿದೆ. ಮುಂದಿನ 24 ಗಂಟೆಗಳಲ್ಲಿ ನೋಟೀಸ್ ಗೆ ಉತ್ತರಿಸಬೇಕೆಂದು ಸೂಚನೆ ನೀಡಿದೆ. ಸಿದ್ದಸಿರಿ ಕಾರ್ಖಾನೆಯಲ್ಲಿ ಅನುಮತಿ ಪಡೆಯದೆ ಕಬ್ಬು ಅರೆಯಲಾಗಿದೆಯಂತೆ. ಕಬ್ಬು ಅರೆದಿರುವುದು ವಾಯು ನಿಯಂತ್ರಣ ಮಂಡಳಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ನೋಟೀಸ್ ನೀಡಲಾಗಿದೆ. ಹೀಗಾಗಿ ನಿಯಮ ಉಲ್ಲಂಘನೆ ಮಾಡಿರಯವ ಆರೋಪದ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ.