ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್
ಮೊ : 87220 22817
ಚಿತ್ರದುರ್ಗ,(ನ.14) : ಸಹಕಾರ ಸಂಘಗಳಲ್ಲಿ ಲೆಕ್ಕ-ಪತ್ರ ಸರಿಯಾಗಿ ಇದ್ದು, ಪಾರದರ್ಶಕತೆಯನ್ನು ಆಡಳಿತ ಮಂಡಳಿ ನೀಡಿದಾಗ ಉತ್ತಮವಾದ ಸಹಕಾರ ಸಂಘವಾಗಲು ಸಾಧ್ಯವಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ನ ನಿದೇಶಕರಾದ ಹೆಚ್.ಎಂ.ದ್ಯಾಮಣ್ಣ ಕೋಗುಂಡೆ ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಲ ನಿಯಮಿತ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳ ಮತ್ತು ಬ್ಯಾಂಕ್‍ಗಳ ಸಂಯುಕ್ತಾಶ್ರಯದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಜಿಲ್ಲಾ ಸಹಕಾರ ಯೂನಿಯನ್‍ನ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ ರಫ್ತು ವೃದ್ದಿಗಾಗಿ ಜೆಮ್-ಪೋರ್ಟಲ್ ಬಳಕೆ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಹಕಾರಿಗಳಿಗೆ ಶಿಕ್ಷಣವನ್ನು ನೀಡುವುದು ಜಿಲ್ಲಾ ಯೂನಿಯನ್ ಕರ್ತವ್ಯವಾಗಿದೆ. ಇದ್ದಲ್ಲದೆ ಸಹಕಾರಕ್ಕೆ ಸಂಬಂಧಿಸಿದ ಕಾನೂನು, ತಿದ್ದುಪಡಿಗಳನ್ನು ಸಹಕಾರ ಸಂಘಗಳ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿಯವರಿಗೆ ತಿಳಿಸುವ ಕೆಲಸವನ್ನು ಯೂನಿಯನ್ ಮಾಡಲಿದೆ ಸಹಕಾರ ಸಪ್ತಾಹ ಎಂದರೆ ಎಲ್ಲಾ ಸಹಕಾರಿಗಳಿಗೆ ಹಬ್ಬ ಇದ್ದಂತೆ ಇಲ್ಲಿ ಹಬ್ಬದ ವಾತಾವರಣ ಮೂಡಬೇಕಿದೆ.
ಚಿತ್ರದುರ್ಗದ ಸಹಕಾರ ಸಂಘಗಳು ಅಭಿವೃದ್ದಿಯನ್ನು ಸಾಧಿಸುತ್ತಿವೆ. ಗಾಂಧೀಜಿ ಮತ್ತು ನೆಹರುರವರು ಸಹಾ ಸಹಕಾರದಿಂದ ಮಾತ್ರ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ನಂಬಿದ್ದರು. ಇದರೊಂದಿಗೆ ಇಂದಿಗೂ ಸಹಾ ಸಹಕಾರ ಇದ್ದರೆ ಮಾತ್ರ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಇಂದಿನ ದಿನಮಾನದಲ್ಲಿ ಎಲ್ಲವನ್ನು ಸಹಾ ಡಿಜಿಟಲ್ ಮಾಡಲಾಗಿದೆ ನಮ್ಮ ರ್ದಐನಂ ದಿನ ವ್ಯವಹಾರವೂ ಸಹಾ ಡಿಜಿಟಲಿಕರಣ ಹೊಂದಬೇಕೆಂದು ಪ್ರದಾನ ಮಂತ್ರಿಗಳು ಇದರ ಬಗ್ಗೆ ವಿಶೇಷವಾದ ಆಸಕ್ತಿಯನ್ನು ಹೊಂದಿ ಜಾರಿ ಮಾಡಿದ್ದಾರೆ. ನಮ್ಮ ವ್ಯವಹಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಡಿಜಿಟಲ್‍ನಲ್ಲಿಯೇ ಮಾಡುವಂತಾಗಬೇಕಿದೆ. ಒಂದು ಸಹಕಾರ ಸಂಘದಲ್ಲಿ ಸರಿಯಾದ ರೀತಿಯಲ್ಲಿ ಲೆಕ್ಕಪತ್ರ ಚನ್ನಾಗಿ ಇರಬೇಕಿದೆ. ಇದರೊಂದಿಗೆ ಪಾರದರ್ಶಕವಾದ ಆಡಳಿತವನ್ನು ಅಲ್ಲಿನ ಆಡಳಿತ ಮಂಡಳಿಯವರು ನೀಡಬೇಕಿದೆ ಆಗ ಮಾತ್ರ ಸಹಕಾರ ಸಂಘ ಉತ್ತಮವಾಗಿ ನಡೆಯಲು ಸಾಧ್ಯವಿದೆ ಎಂದು ದ್ಯಾಮಣ್ಣ ತಿಳಿಸಿದರು.
ಸಹಕಾರ ಸಂಘಗಳ ಲೆಕ್ಕಪರಿಶೋಧಕ ಇಲಾಖೆಯ ಉಪ ನಿರ್ದೇಶಕರಾದ ಮಹಮ್ಮದ್ ಅಬೀಬ್ ಹುಸೇನ್ ಮಾತನಾಡಿ, ಗ್ರಾಮಗಳ ಉದ್ದಾರದಿಂದ ಮಾತ್ರ ದೇಶದ ಅಭೀವೃದ್ದಿ ಹೊಂದಲು ಸಾಧ್ಯ ಎಂಬ ಮಾತನ್ನು ಗಾಂಧಿಜೀಯವರು ಹೇಳಿದ್ದರು ಇದು ಸಹಾ ಸತ್ಯವಾಗಿದೆ. ಸರ್ಕಾರ ವಿವಿಧ ರೀತಿಯ ಯೋಜನೆಯನ್ನು ಜಾರಿ ಮಾಡಿದರೆ ಅದನ್ನು ಅನುಷ್ಠಾನಕ್ಕೆ ತರಲು ಸಹಕಾರ ಸಂಘಗಳಿಂದ ಮಾತ್ರ ಸಾಧ್ಯವಿದೆ. ಇತ್ತೀಚಿನ ದಿನದಲ್ಲಿ ಸಹಕಾರ ಸಂಘಗಳ ಬೆಳವಣಿಗೆ ಕಡಿಮೆಯಾಗಿದೆ. ಸಹಕಾರ ಸಂಘಗಳಲ್ಲಿ ಲೆಕ್ಕ ಪರಿಶೋಧನೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ, ಲೆಕ್ಕ ಸರಿ ಇದ್ದರೆ ಸಹಕಾರ ಸಂಘ ಲಾಭದಲ್ಲಿಯೂ ನಷ್ಠದಲ್ಲಿಯೂ ಎಂದು ತಿಳಿಯುತ್ತದೆ. ಇದ್ದಲ್ಲದೆ ಸರ್ಕಾರದ ಧೇಯ ಉದ್ದೇಶ ಈಡೇರುತ್ತದೆ ಎಂದರು.
ಸಹಕಾರ ಸಂಘಗಳ ಉಪ ನಿಬಂಧಕರಾದ ಹೆಚ್.ಮೂರ್ತಿ ಮಾತನಾಡಿ, ದೇಶದ ಜನ ಸಂಖ್ಯೆಯಲ್ಲಿ ಶೇ.30 ರಷ್ಟು ಮಾತ್ರ ಸಹಕಾರ ಕ್ಷೇತ್ರದಲ್ಲಿ ತೂಡಗಿಸಿಕೊಂಡಿದ್ದಾರೆ ಉಳಿದವರು ಇದರ ಸುದ್ದಿಗೆ ಬರುತ್ತಿಲ್ಲ, ಇತ್ತೀಚಿನ ದಿನಮಾನದಲ್ಲಿ ಯುವ ಜನಾಂಗಕ್ಕೆÀ ಸಹಕಾರ ಎಂದರೆ ಗೊತ್ತಿಲ್ಲ, ಎಲ್ಲರು ಸಹಕಾರದಲ್ಲಿ ತೂಡಗಿದಾಗ ಉತ್ತಮವಾದ ಫಲಿತಾಂಶ ಹೊರಬರಲು ಸಾಧ್ಯವಿದೆ ಇದ್ದಲ್ಲದೆ ಸಹಕಾರವೂ ಸಹಾ ಉತ್ತಮವಾಗಿ ಬೆಳೆಯಲು ಅನುಕೂಲವಾಗಲಿದೆ ಎಂದರು.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಧು ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗ ತಾಲ್ಲೂಕಿನಲ್ಲಿ 1000 ಸಹಕಾರ ಸಂಘಗಳಲ್ಲಿ 720 ಮಾತ್ರ ಕೆಲಸವನ್ನು ಮಾಡುತ್ತಿವೆ. ಸಪ್ತಾಹವನ್ನು ಆಚರಣೆ ಮಾಡುವುದರಿಂದ ಸಹಕಾರಿಗಳಲ್ಲಿ ಹೆಚ್ಚಿನ ಆತ್ಮಸ್ಥರ್ಯ ಮೂಡುತ್ತದೆ. ಸರ್ಕಾರ ಯಶಸ್ವಿನಿ ಯೋಜನೆಯನ್ನು ಜಾರಿ ಮಾಡುತ್ತಿದೆ ಇದರಿಂದ ಸಹಕಾರ ಕ್ಷೇತ್ರ ಮತ್ತಷ್ಟು ಬೆಳೆಯಲು ಸಹಕಾರಿಯಾಗಲಿದೆ. ಡಿ.31 ಯಶಸ್ವನಿ ನೊಂದಾಣೀಗೆ ಕೂನೆಯ ದಿನವಾಗಿದೆ ಸಹಕಾರ ಸಂಘಗಳ ಅಧ್ಯಕ್ಷರು ಕಾರ್ಯದರ್ಶೀಗಳು ಅಲ್ಲಿಯವರೆಗೂ ಕಾಯದೇ ಈ ತಿಂಗಳ ಅಂತ್ಯಕ್ಕೆ ಹೆಚ್ಚಿನ ರೀತಿಯಲ್ಲಿ ಸದಸ್ಯರನ್ನು ನೊಂದಾವಣಿಯನ್ನು ಮಾಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೂನಿಯನ್‍ನ ನಿದೇಶಕರಾದ ರಾಮರೆಡ್ಡಿ, ಎಸ್.ಆರ್ ಗೀರೀಶ್, ಶಿವಪ್ರಕಾಶ್, ಜಿಂಕಲ್ ಬಸವರಾಜು, ಅಜ್ಜಪ್ಪ, ಜಗನ್ನಾಥ್, ಮಹಾಂತೇಶ್, ಟಿಎಪಿಸಿಎಂಎಸ್‍ನ ಅಧ್ಯಕ್ಷ ಮಂಜುನಾಥಪ್ಪ, ಪಿಕಾರ್ಡ್ ಬ್ಯಾಂಕ್‍ನ ಅಧ್ಯಕ್ಷ ರವಿಕುಮಾರ್, ರಾಜ್ಯ ಸಹಕಾರ ಖಾದಿಯೇತರ ಉಣ್ಣೇ ಕೈಮಗ್ಗ ನೇಕಾರರ ಮಹಾ ಮಂಡಳದ ಅಧ್ಯಕ್ಷ ಜಯರಾಂ, ಜಿಲ್ಲಾ ತೋಟದ ಬೆಳೆಗಾರರ ಮತ್ತು ಸಂಸ್ಕರಣೆ ಸಹಕಾರ ಸಂಘದ ಅಧ್ಯಕ್ಷ ಕೆಂಚವೀರಪ್ಪ ಸಿಡಿಸಿಸಿ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಷರೀಫ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥರಾದ ಡಾ.ಸಿ.ಚನ್ನಕೇಶವ ಸಹಕಾರದ ಬಗ್ಗೆ ಉಪನ್ಯಾಸವನ್ನು ನೀಡಿದರು.