Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಕಾಂಗ್ರೆಸ್‌ನ ಎರಡು ಕಣ್ಣುಗಳಿದ್ದಂತೆ : ಎನ್.ಡಿ.ಕುಮಾರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಜೂ.06):  ಶೋಷಿತ ಸಮುದಾಯದವರ ಧ್ವನಿಯಾಗಿದ್ದವರು ದೇವರಾಜ ಆರಸು ರವರು ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಎನ್.ಡಿ.ಕುಮಾರ್ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ದೇವರಾಜ ಅರಸುರವರ 41ನೇ ಪುಣ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅವರ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿನ ಶೋಷಿತ ಸಮುದಾಯವರನ್ನು ಒಟ್ಟಾಗಿ ತೆಗೆದುಕೊಂಡು ಅವರು ಸಹಾ ಎಲ್ಲರಂತೆ ಎಂಬಂತೆ ಬೇರೆಯವರಿಗೆ ಸಮಾನವಾದ ಸ್ಥಾನವನ್ನು ನೀಡಿದವರು ದೇವರಾಜ ಅರಸು ರವರು ಎಂದರು.

ದೇವರಾಜು ಅರಸು ರವರ ಉತ್ತರಾಧಿಕಾರಿಯಾಗಿ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ಹಿಂದುಳಿದ ವರ್ಗದವರಿಗೆ ವಿಶೇಷವಾದ ಸ್ಥಾನವನ್ನು ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ಕರೆತರುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದ ಅವರು,  ದೇವರಾಜ ಅರಸು ಮತ್ತು ಸಿದ್ದರಾಮಯ್ಯರವರು ಕಾಂಗ್ರೆಸ್‌ನ ಎರಡು ಕಣ್ಣುಗಳಿದ್ದಂತೆ ಈ ಇಬ್ಬರು ಸಹಾ ಎಂದೆದಿಗೂ ಸಹಾ ಉತ್ತಮರಾಗಿದ್ದಾರೆ ಎಂದು ಕುಮಾರ್ ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂಪತ್ ಕುಮಾರ್ ಮಾತನಾಡಿ, ದೇವರಾಜ್ ಅರಸುರವರು ಎರಡು ಭಾರಿ ಮುಖ್ಯಮಂತ್ರಿಗಳಾಗಿದ್ದವರು, ಸರಳತೆಗೆ ನಿರ್ದಶನವಾಗಿದ್ದವರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ವಿಶೇಷವಾದ ಕಾಳಜಿಯನ್ನು ಹೊಂದಿದ್ದವರಾಗಿದ್ದರು.

ಸಣ್ಣ ಸಣ್ಣ ಸಮುದಾಯವರನ್ನು ಗುರುತಿಸಿ ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಸಾಧ್ಯವಾಗದವರಿಗೆ ರಾಜಕೀಯ ಪ್ರಾತಿನಿದ್ಯವನ್ನು ನೀಡಿದವರು. ಈಗಿನ ಕೇಂದ್ರದ ಹಲವಾರು ನಾಯಕರು ಇವರ ಗರಡಿಯಲ್ಲಿ ಬೆಳದಿದ್ದಾರೆ. ಹಾವನೂರುರವರನ್ನು ಗುರುತಿಸಿ ಮಂತ್ರಿಗಳನ್ನಾಗಿ ಮಾಡಿ ಅವರಿಂದ ವರದಿಯನ್ನು ತರಿಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉತ್ತಮವಾದ ಸೌಲಭ್ಯವನ್ನು ನೀಡಿದವರು ಅರಸುರವರು ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಭೂ ಓಡೆತನವನ್ನು ಜಾರಿ ಮಾಡುವುದರ ಮೂಲಕ ಸಾವಿರಾರು ಕುಟುಂಬಗಳಿಗೆ ಭೂಮಿಯನ್ನು ಕೂಡಿಸಿದ್ದಾರೆ. ಬಡವರ ಬಗ್ಗೆ ಕಾಳಜಿಯನ್ನು ಹೊಂದಿದವರಾಗಿದ್ದವರು ಅರಸು ರವರು, ಜನೆತೆಗೆ ವಿವಿಧ ರೀತಿಯ ಯೋಜನೆಯನ್ನು ನೀಡುವುದರ ಮೂಲಕ ಅವರಿಗೆ ನೆರವಾಗಿ ನಿಂತಿದ್ದರು, ಈಗಿನ ಸರ್ಕಾರ ಗ್ಯಾರೆಂಟಿ ಕಾರ್ಡಗಳನ್ನು ಜಾರಿ ಮಾಡುತ್ತಿದೆ. ಜಿಲ್ಲಾ ಮಂತ್ರಿ ಸ್ಥಾನವನ್ನು ಜಿಲ್ಲೆಯವರಿಎಗ ನೀಡಬೇಕಿದೆ ಬೇರೆಯವರಿಗೆ ನೀಡಬಾರದು. ಮುಂಬರುವ ಲೋಕಸಭಾ ಚುಣಾವಣೆಯನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಿದೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಗೆಲ್ಲಲೇ ಬೇಕಿದೆ. ಗ್ಯಾರೆಂಟಿಯಿಂದಾಗಿ ವಿರೋಧ ಪಕ್ಷದವರಿಗೆ ನಡುಕ ಉಂಟಾಗಿದೆ. ನಮ್ಮ ಬಗ್ಗೆ ಮಾತನಾಡುವಾಗ ಸರಿಯಾದ ರೀತಿಯಲ್ಲಿ ಮಾತನಾಡಬೇಕಿದೆ ಉಡಾಫೆ ಮಾತುಗಳನ್ನು ಆಡಬಾರದೆಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತಾಜ್‌ಪೀರ್ ಮಾತನಾಡಿ ದೇವರಾಜ್ ಅರಸು ರವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಸಣ್ಣ ಸಮುದಾಯವರು ರಾಜಕೀಯ ಮಾಡುವುದಕ್ಕೆ ಬರುತ್ತಿರಲಿಲ್ಲ ಇವರು ಅದಿಕಾರಕ್ಕೆ ಬಂದ ಮೇಲೆ ಅವರು ಸಹಾ ರಾಜಕೀಯ ಮಾಡಬಹುದೆಂದು ತೋರಿಸಿದವರು ಅರಸುರವರು ಎಂದು ತಿಳಿಸಿ, ಐದು ವರ್ಷ ಮುಖ್ಯಮಂತ್ರಿಗಳಾಗಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಇದುವರೆವಿಗೂ ರಾಜ್ಯವನ್ನು ಐದು ವರ್ಷ ಆಳಿದವರಲ್ಲಿ ಅರಸುರವರು ಮೊದಲಿಗರಾದರೆ ಸಿದ್ದರಾಮಯ್ಯರವರು ಎರಡನೇವರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಮಂಜಪ್ಪ, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಧ ಸ್ವಾಮಿ, ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಜಯ್ಯಣ್ಣ, ಪ್ರಕಾಶ್, ಖುದ್ದಸ್, ಪ್ರಕಾಶ್ ಮೂರ್ತಿ, ರವಿಕುಮಾರ್, ಒಡೆಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!