Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೀರಿನಲ್ಲಿ ಯುರೇನಿಯಂ ಅಂಶ ಪತ್ತೆ, ವೈಜ್ಞಾನಿಕವಾಗಿ ಶುದ್ಧೀಕರಿಸಿ ಸಾರ್ವಜನಿಕರಿಗೆ ಕುಡಿಯಲು ಅನುವುಮಾಡಿಕೊಡಿ : ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಮನವಿ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ :  ಜಿಲ್ಲೆಯ ಕುಡಿಯುವ ನೀರಿನ ಎಲ್ಲಾ ಕೊಳವೆಬಾವಿಗಳ ನೀರಿನ ರಸಾಯನಿಕ ವಿಶ್ಲೇಷಣೆಯನ್ನು ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ಮಾಡುವುದರಿಂದ ಯುರೇನಿಯಂ ಅಥವಾ ಇತರೆ ಲವಣಾಂಶಗಳು ಮತ್ತು ಖನಿಜಾಂಶಗಳು ಕಂಡುಬಂದಲ್ಲಿ ಆ ಕೊಳವೆ ಬಾವಿಗಳ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಸಾರ್ವಜನಿಕರಿಗೆ ಕುಡಿಯಲು ಅನುವುಮಾಡಿಕೊಡಬೇಕಾಗಿ ಸಂಬಂಧ ಪಟ್ಟ ಇಲಾಖೆಗೆ ಮಾರ್ಗದರ್ಶನ ನೀಡಬೇಕೆಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯುರೇನಿಯಂ ಅಂಶದ ಪರಿಮಿತಿ 30 ಮೈಕ್ರೋಗ್ರಾಂ./ಲೀ. ಮತ್ತು ಭಾರತದ ಪರಿಮಾಣುಶಕ್ತಿ ನಿಯಂತ್ರಣ ಮಂಡಲಿ ಪ್ರಕಾರ 60 ಮೈಕ್ರೋಗ್ರಾಂ./ಲೀ. ಎಂದು ನಿಗದಿಪಡಿಸಲಾಗಿದೆ. ಆದರೆ 73 ಹಳ್ಳಿಗಳ ಅಂತರ್ಜಲದಲ್ಲಿ ಸುಮಾರು 57 ಹಳ್ಳಿಗಳಲ್ಲಿನ ಯುರೇನಿಯಂ ಅಂಶ 30 ಮೈಕ್ರೋಗ್ರಾಂ./ಲೀ. ಗಿಂತ ಹೆಚ್ಚಾಗಿದೆ ಮತ್ತು 48 ಹಳ್ಳಿಗಳಲ್ಲಿ 60 ಮೈಕ್ರೋಗ್ರಾಂ./ಲೀ. ಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ ಚಿತ್ರದುರ್ಗ ಜಿಲ್ಲೆಯ ಒಂದು ಹಳ್ಳಿ, ತುಮಕೂರು ಜಿಲ್ಲೆಯ ಒಂದು ಹಳ್ಳಿ, ಚಿಕ್ಕಬಳ್ಳಾಪುರದ 7 ಹಳ್ಳಿಗಳಲ್ಲಿ, ಕೋಲಾರದ 5 ಹಳ್ಳಿಗಳಲ್ಲಿ 1000 ಮೈಕ್ರೋಗ್ರಾಂ./ಲೀ. ಗಿಂತ ಹೆಚ್ಚಾಗಿರುವುದು ಕಂಡುಬಂದಿದೆ.

ಆದರೆ ಈ ಜಿಲ್ಲೆಗಳ ಸಮೀಪದಲ್ಲಿ ಯಾವುದೇ ಪರಮಾಣು ವಿದ್ಯುತ್ ಸ್ಥಾವರಗಳಿಲ್ಲ ಆದರೆ ಯುರೋನಿಯಂ ಪ್ರಮಣದ ಹೆಚ್ಚಾಗಿರಲು ಕಾರಣವೇನೆಂದರೆ ಮಾನವನು ಹೆಚ್ಚಿನ ಅಂತರ್ಜದದ ಬಳಕೆ ಮಾಡುತ್ತಿರುವುದರಿಂದ ಅಂತರ್ಜಲದ ಪ್ರಮಾಣ ಕುಗ್ಗಿದೆ ಮತ್ತು ಕೆಳಮಟ್ಟಕ್ಕೆ ಹೋಗಿದೆ‌. ಆದುದ್ದರಿಂದ ಯುರೇನಿಯಂ ಅಂಶದ ಸಾಂದ್ರತೆ ಹೆಚ್ಚಾಗಲು ಕಾರಣವಾಗಿದೆ ಮತ್ತು ಭೂವೈಜ್ಞಾನಿಕ ಅಧ್ಯಯನದ ನಕಾಶೆಯಿಂದ ಮತ್ತು ಆರ್ ಗಾಮಕಿರಣ ಸ್ಪೇಕ್ಟೋಮಿಟಿಕ್ ಅಧ್ಯಯನದಿಂದ ಈ ಜಿಲ್ಲೆಗಳಲ್ಲಿ ಪೊಟಾಶಿಯಂ, ಯುರೇನಿಯಂ ಮತ್ತು ತೋರಿಯಂ ಖನಿಜದ ಲಭ್ಯತೆಯಿರುವುದಾಗಿ ಮಾಹಿತಿಯಿದೆ.

ಹೆಚ್ಚಿನ ಯುರೇನಿಯಂ ಅಂಶದ ನೀರನ್ನು ಸೇವಿಸುವುದರಿಂದ ಕ್ರಮೇಣ ಕಿಡ್ನಿ, ಲಿವರ್ ಮತ್ತು ಥೈರಾಯಿಡ್‍ನಂತಹ ಖಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚಾಗಿದೆ ಹಾಗೂ ವಿಕಿರಣಶಾಸ್ತ್ರದ ಸಮಸ್ಯೆಗಳಾದ ಕಿಡ್ನಿ ಕ್ಯಾನ್ಸರ್, ಮೂಳೆ ಕ್ಯಾನ್ಸರ್ ಇತ್ಯಾದಿಗಳಿಗೆ ತುತ್ತಾಗುವ ಸಂಭವವಿರುತ್ತದೆ.

ಯುರೇನಿಯಂ ಒಂದು ಮೂಲ ಲೋಹ ದಾತು ವಿಕಿರಣಶೀಲ ವಸ್ತು ನೈಸರ್ಗಿಕವಾಗಿ ಅಗ್ನಿಶಿಲೆ, ಪದರಶಿಲೆ ಮತ್ತು ರೂಪಾಂತರಶಿಲೆಗಳಲ್ಲಿ ದೊರೆಯುತ್ತದೆ. ಅಂತರ್ಜಲದಲ್ಲಿ ಯುರೇನಿಯಂ ಅಂಶವನ್ನು ಬೇರ್ಪಪಡಿಸಲು ವೈಜ್ಞಾನಿಕವಾಗಿ ಕೆಲವು ವಿಧಾನಗಳಿವೆ. ಅವುಗಳಲ್ಲಿ ಆರ್.ಓ. ಘಟಕದಿಂದ ಶುದ್ಧಿಕರಿಸುವ ವಿಧಾನವು ಬಳಕೆಯಲ್ಲಿದೆ. ಆದುದರಿಂದ ಕುಡಿಯುವ ನೀರಿನಲ್ಲಿ ಯುರೇನಿಯಂ ಅಂಶ ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಭಾರತದ ಪರಮಾಣು ಶಕ್ತಿ ನಿಯಂತ್ರಣ ಮಂಡಳಿಯವರು ನಿಗದಿ ಪಡಿಸಿದ ಪ್ರಮಾಣದ ನೀರನ್ನು ಕುಡಿಯಲು ಉಪಯೋಗಿಸುವುದರಿಂದ ಮೇಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಹೆಚ್ಚಿನ ಯುರೇನಿಯಂ ಅಂಶಗಳಿರುವ ಪ್ರದೇಶಗಳಲ್ಲಿ (ಜಲನಯನ ಪ್ರದೇಶದಲ್ಲಿ) ಅಂತರ್ಜಲ ಮರುಪೂರಣ ರಚನೆಗಳಿಗೆ ಹೆಚ್ಚು ಒತ್ತು ನೀಡಬೇಕು ಇದರಿಂದ ಆ ಪ್ರದೇಶದ ಅಂತರ್ಜಲದ ಮಟ್ಟ ವೃದ್ಧಿಯೊಂದಿ ಸಂದ್ರತೆಯೊಂದಿದ ಖನಿಜಗಳು ತಿಳಿಯಾಗುತ್ತವೆ.

ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಮಂಗಳೂರು ವಿದ್ಯಾನಿಲಯದ ಪರಿಸರ ವಿಕಿರಣಶೀಲ ವಿಭಾಗದ, ವಿಜ್ಞಾನಗಳು ಕರ್ನಾಟಕದ ಪೂರ್ವ ಭಾಗದ ಜಿಲ್ಲೆಗಳಾದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಪ್ರದೇಶಗಳ 73 ಹಳ್ಳಿಗಳ ಕುಡಿಯುವ ನೀರಿನ ಕೊಳವೆ ಬಾವಿಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣೆ ಮಾಡಲಾಗಿದೆ.

ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)                 ಮೊ : 94483 38821

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!