ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಕೊಡಲು ಉಪ ಮುಖ್ಯಮಂತ್ರಿ @DKShivakumar ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಗುತ್ತಿಗೆದಾರರೇ ಅರೋಪಿಸಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.
ಒಂದಾದ ಮೇಲೊಂದರಂತೆ @INCKarnataka ಸರ್ಕಾರದ ಸಚಿವರ ಮೇಲೆ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇವೆ. ಇದೀಗ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಸರದಿ.
ಇದೆಲ್ಲಾ ತಿಳಿದಿದ್ದರೂ ಮುಖ್ಯಮಂತ್ರಿ @siddaramaiah ನವರು ಕಣ್ಮುಚ್ಚಿ ಕುಳಿತಿರುವುದನ್ನು ನೋಡಿದರೆ ಇದರಲ್ಲಿ ಅವರ ಪಾಲು ಇರುವಂತೆ ತೋರುತ್ತದೆ. ಇಲ್ಲದಿದ್ದರೆ ಈ ಎಲ್ಲಾ ಆರೋಪಗಳಿಗೆ ಸೂಕ್ತ ತನಿಖೆ ನಡೆಸುವುದರ ಬದಲು ಸಮರ್ಥಿಸಿಕೊಳ್ಳುತ್ತಿರಲಿಲ್ಲ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲನೆಯ ದಿನವೇ ಸಮರ್ಥವಾಗಿ ಜಾರಿ ಮಾಡಿದ ಏಕೈಕ ಗ್ಯಾರಂಟಿ ಎಂದರೆ ಅದು ‘ಭ್ರಷ್ಟಾಚಾರ’. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ, ದುರಾಡಳಿತ ನೋಡಿ ಈಗಾಗಲೇ ಅಧಿಕಾರಕ್ಕೆ ತಂದ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿರುವ ರಾಜ್ಯದ ಜನರೇ ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.