ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಮತ್ತು ಧರ್ಮಸೇನಾ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ಹರೊಹಾಯ್ದಿದ್ದಾರೆ. ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಇದ್ದಿದ್ದರೆ ದಲಿತರಿಗೆ ಅನ್ಯಾಯ ಮಾಡ್ತಿರಲಿಲ್ಲ. ದಲಿತ ಮುಖಂಡರನ್ನ ಬಿಜೆಪಿಯಲ್ಲಿ ಗುಲಾಮ ಕೆಲಸ ಮಾಡಲು ಬಳಸಿಕೊಳ್ಳುತ್ತಾರೆ.
ಛಲವಾದಿ ನಾರಾಯಣ ಸ್ವಾಮಿ ಬಟ್ಟೆ ಹೊತ್ತುಕೊಂಡು ಬಂದಿದ್ದಾರೆ. ಅವರು ಹೇಳಿದಂತೆ ಇವರು ಮಾಡ್ತಿದ್ದಾರೆ. ಬಿಜೆಪಿ ಸರ್ಕಾರ ಬಂದ ಬಳಿಕ ಎಸ್ಸಿ ಎಸ್ಟಿ ಜನರ ಕಲ್ಯಾಣಕ್ಕೆ ಮೀಸಲಿಟ್ಟ ಹಣ ಕಡಿಮೆ ಮಾಡಲಾಗಿದೆ. ಬಜೆಟ್ ಗಾತ್ರ ಮಾತ್ರ ಇವರ ಅವಧಿಯಲ್ಲಿ ಜಾಸ್ತಿ ಆಗಿದೆ. ಆದ್ರೆ ದಲಿತರಿಗೆ ಮೀಸಲಿಟ್ಟ ಹಣ ಕಡಿಮೆ ಮಾಡಿದೆ. ಸಮುದಾಯಕ್ಕೆ ಮೋಸ ಮಾಡುವ ಕೆಲಸ ಮಾಡಿದ್ದಾರೆ ಎಂದು ಧೃವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ಎಸ್ಸಿ ಎಸ್ಟಿ ಶಾಸಕರು ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಟ್ಸ್ ಇದ್ರೆ ನಮ್ಮ ಸಮುದಾಯಕ್ಕೆ ಮೀಸಲಿಟ್ಟ ಹಣ ಬಿಡುಗಡೆ ಮಾಡ್ಸಿ. ಬಿಜೆಪಿ ಅವರ ಗುಲಾಮರ ರೀತಿ ಕೆಲಸ ಮಾಡ್ತೀರಾ..ಅವರಿಗೆ ಹೆದರಿಕೊಳ್ಳುತ್ತಿರಾ..? ಸರ್ಕಾರ ಮುಂದುವರೆಯಲು ನಿಮಗೆ ನೈತಿಕತೆಯೇ ಇಲ್ಲ. ಸಮುದಾಯಕ್ಕೆ ಮೋಸ ಮಾಡಿದವರು ಮುಂದೂವರೆಲು ನೈತಿಕತೆ ಇಲ್ಲವೇ ಇಲ್ಲ.
ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನ ಬಿಜೆಪಿ ಅನಾಥ ಶಿಸುಗಳನ್ನಾಗಿ ಮಾಡಿದೆ. ಪಠ್ಯಕ್ರಮದಲ್ಲಿ ಅಂಬೇಡ್ಕರ್ ಪಾಠ ಕೈಬಿಟ್ಟು ಬಿಜೆಪಿ ಶಾಸಕರು ತುಟಿ ಬಿಚ್ಚಲಿಲ್ಲ. ನಮ್ಮ ದುಡ್ಡಿನಲ್ಲೂ ಕಮಿಷನ್ ಹೊಡೆದಿದ್ದಾರೆ. ನಾಗಮೋಹನ್ ದಾಸ್ ವರದಿ ಬಂದ ಬಳಿಕ ರಾಮುಲು 24 ಗಂಟೆ ಒಳಗೆ ಕೊಡ್ತೀವಿ. ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳಿದ್ರು, ಯಾಕೆ ಮರೆತುಬಿಟ್ರಾ.. ನಾವು ಅಧಿಕಾರಕ್ಕೆ ಬಂದ್ರೆ ನಾಗಮೋಹನ್ ದಾಸ್ ರಿಪೋರ್ಟ್ ಜಾರಿ ಮಾಡ್ತೀವಿ ಎಂದಿದ್ದಾರೆ.
ಇದೆ ವೇಳೆ ಪ್ರಹ್ಲಾದ್ ಜೋಶಿ ವಿರುದ್ಧ ಧೃವನಾರಾಯಣ್ ಆಕ್ರೋಶ ಹೊರ ಹಾಕಿದ್ದು, ಅವರು ಒಬ್ಬ ಕೇಂದ್ರ ಸಚಿವರ ರೀತಿ ಮಾತನಾಡಬೇಕು. ನಮ್ಮಲ್ಲಿ ಒಗ್ಗಟ್ಟಿದೆ ಬಿಜೆಪಿಯಲ್ಲಿ ನಾಯಕರ ನಡುವೆ ಕಚ್ಚಾಟವಿದೆ. ಯತ್ನಾಳ್ ಸಿಎಂ ಹುದ್ದೆ ಮಾರಾಟಕ್ಕಿದೆ ಎಂದು ಹೇಳಿದ್ದಾರೆ. ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಕೋಟಿ ಕೋಟಿ ರೂಪಾಯಿ ಕೊಟ್ಟು ಸಚಿವರನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ರು. ಯಾಕೆ ಅವರ ವಿರುದ್ಧ ಕ್ರಮ ಇಲ್ಲ. ನಮ್ಮ ನಾಯಕರನ್ನ ನೋಡಿದ್ರೆ ಇವರಿಗೆ ಹೊಟ್ಟೆ ಕಿಚ್ಚು. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಇದ್ದಿದ್ರೆ ನಾನೇ ತೆಗೆದುಕೊಂಡು ಹೋಗಿ ಕೊಡ್ತಿದ್ದೆ ಎಂದರು.