ನವದೆಹಲಿ: ನಾಡಿನಲ್ಲೆಡೆಡ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬದ ಸೊಬಗು ಮನೆ ಮನೆಯಲ್ಲೂ ಪಸರಿಸಿದೆ. ಇಂಥ ಸಂದರ್ಭದಲ್ಲಿ ಕೈನಲ್ಲಿ ಹೆಚ್ಚು ಹಣವಿದ್ದರೆ ಸಂಭ್ರಮ ದುಪ್ಪಟ್ಟಾಗದೆ ಇರುತ್ತದೆಯೇ. ಕೇಂದ್ರ ಸರ್ಕಾರದಿಂದ ಹಬ್ಬದ ಸಮಯದಲ್ಲಿಯೇ ಉಡುಗೊರೆ ನೀಡಿದೆ.
ಕೇಂದ್ರ ಸರ್ಕಾರ ತನ್ನ ಸರ್ಕಾರಿ ನೌಕರರಿಗೆ 7ನೇ ವೇತನಾ ಆಯೋಗದ ಶಿಫಾರಸ್ಸಿನ ಮೇರೆಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಶೇಕಡ 4 ಪರ್ಸೆಂಟ್ ಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಇದೀಗ ಶೇಕಡಾ 38ರಷ್ಟು ಡಿಎ ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ.
ಕಳೆದ ಜನವರಿಯಲ್ಲಿಯೇ ತುಟ್ಟಿಭತ್ಯೆಯನ್ನು ಶೇಕಡ 3 ರಷ್ಟು ಹೆಚ್ಚಳ ಮಾಡಲಾಗಿತ್ತು. ಅದು ಮಾರ್ಚ್ ನಿಂದ ಜಾರಿಯಾಗಿತ್ತು. ಆಗ ಶೇಕಡ 34ರಷ್ಟು ತುಟ್ಟಿ ಭತ್ಯೆ ಇತ್ತು. ಈಗ ಮತ್ತೆ ಏರಿಕೆಯಾಗಿದ್ದು, ಒಟ್ಟು 38ರಷ್ಟಾಗಿದೆ.