ಬೆಂಗಳೂರು: ಶೈಕ್ಷಣಿಕ ವರ್ಷ ಮುಗಿದಿದೆ. ಮಕ್ಕಳೆಲ್ಲಾ ಪ್ರಮುಖ ಘಟ್ಟದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. SSLC ಪರೀಕ್ಷೆ ಮುಗಿಯಬೇಕಿದೆ. ಆದರೆ ಈ ಮಧ್ಯೆ ಪಠ್ಯ ಬದಲಾವಣೆಯ ಬಗ್ಗೆ ವರದಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಯಾವೆಲ್ಲಾ ಪಠ್ಯಗಳು ಇರಲಿದೆ ಎಂಬುದರ ಸುಳಿವು ನೀಡಲಾಗಿದೆ.
ಶಾಲಾ ಶಿಕ್ಷಣದ ಕೇಂದ್ರ ಮತ್ತು ರಾಜ್ಯದ ಉನ್ನತ ಸಲಹಾ ಸಂಸ್ಥೆಯಾದ NCERT ಪಠ್ಯಕ್ರಮವನ್ನು ಪರಿಷ್ಕರಿಸುವ ಕೆಲಸ ಆರಂಭಿಸಿದೆ. ಇದರಲ್ಲಿ ದ್ವಿತೀಯ ಪಿಯುಸಿ ಪಠ್ಯದಲ್ಲಿ ಮೊಘಲ್ ಸಾಮ್ರಾಜ್ಯದ ಪಠ್ಯವನ್ನು ಕೈಬಿಡಲಾಗಿದೆ. ಇದು ಸಿಬಿಎಸ್ಸಿ ಹಾಗೂ 12ನೇ ತರಗತಿ ಬೋರ್ಡ್ ಪಠ್ಯದಿಂದ ತೆಗೆಯಲಾಗಿದೆ. ಥೀಮ್ಸ್ ಆಫ್ ಇಂಡಿಯನ್ ಹಿಸ್ಟರಿ ಭಾಗ 2ರಿಂದ ಕಿಂಗ್ಸಗ ಆ್ಯಂಡ್ ಕ್ರೋನಿಕಲ್ಸ್ : ದಿ ಮೊಘಲ್ ಕೋರ್ಟ್ಸ್ ಅಧ್ಯಯನವನ್ನು ಕೈಬಿಟ್ಟಿದ್ದಾರೆ.
2023-24ರಿಂದ ಇದು ಜಾರಿಗೆ ಬರಲಿದೆ. ಇದರ ಜೊತೆಗೆ ಪಿಯುಸಿ ಪಠ್ಯ ಪುಸ್ತಕದಲ್ಲಿ ಇನ್ನು ಹಲವು ವಿಚಾರಗಳನ್ನು ಕೈಬಿಡಲಾಗಿದೆ. ವಿಶ್ವ ರಾಜಕೀಯದಲ್ಲಿ ಅಮೆರಿಕಾದ ಪ್ರಾಬಲ್ಯ ಹಾಗೂ ಶೀತಲ ಸಮರದ ಯುಗ ಎಂಬ ಅಧ್ಯಾಯಗಳನ್ನು ಕೈ ಬಿಡಲಾಗಿದೆ.