ಬೆಂಗಳೂರು: ಕೊರೊನಾ ಜೂನಿಯರ್ ತಳಿ ಈಗಾಗಲೇ ರಾಜ್ಯದಲ್ಲಿ ಆತಂಕ ಸೃಷ್ಟಿ ಮಾಡಿದೆ. ಚಳಿಯ ವಾತವಾರಣದ ಜೊತೆಗೆ ವೈರಸ್ ಕಾಟವೂ ಜನರನ್ನು ಭಯಗೊಳಿಸಿದೆ. ಪ್ರತಿದಿನ ಕೊರೊನಾ ಕೇಸ್ ಗಳು ಒಂದೊಂದೆ ಏರಿಕೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 125ಕ್ಕೆ ಏರಿಕೆಯಾಗಿದೆ. ಜೊತೆಗೆ ಇಂದು 3 ಜನ ಸಾವನ್ನಪ್ಪಿರುವ ವರದಿ ಆಗಿದೆ.
ಆರೋಗ್ಯ ಇಲಾಖೆ ಕೊರೊನಾ ಮಾಹಿತಿ ನೀಡಿದ್ದು, 2072 ಜನರಿಗೆ RTPS ಟೆಸ್ಟ್ ಮಾಡಲಾಗಿದೆ. 1083 ಜನರಿಗೆ RAT ಟೆಸ್ಟ್ ಕೂಡ ಮಾಡಲಾಗಿದೆ. ಇದರಲ್ಲಿ 125 ಜನರಿಗೆ ಪಾಸಿಟಿವ್ ಎಂದು ದೃಢಪಟ್ಟಿದೆ.
ರಾಜ್ಯದಲ್ಲಿ ಒಟ್ಟು 436 ಆಕ್ಟೀವ್ ಕೇಸ್ ಗಳಿದ್ದು, 400 ಜನ ಹೋಮ್ ಐಸೋಲೇಷನ್ ಆಗಿದ್ದಾರೆ. 7 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 36 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನೇ ದಿನೇ ಕೇಸ್ ಗಳ ಹೆಚ್ಚಳವೂ ಜಾಸ್ತಿಯಾಗುತ್ತಿದೆ. ಕೊರೊನಾದಿಂದ ಸಾವು ಕೂಡ ಸಂಭವಿಸುತ್ತಿದೆ. ಹೀಗಾಗಿ ಜನ ಕೂಡ ಎಚ್ಚರದಿಂದ ಇರಬೇಕಾಗಿದೆ.
ಈಗಾಗಲೇ ಸರ್ಕಾರದಿಂದ ಮಾರ್ಗಸೂಚಿ ಕೂಡ ನೀಡಲಾಗಿದೆ. ಮಾಸ್ಕ್ ಕಡ್ಡಾಯವಾಗಿ ಬಳಸಿ, ಶುಚಿಯಾಗಿರುವುದು ನಮ್ಮ ಆರೋಗ್ಯಕ್ಕೇನೆ ಒಳ್ಳೆಯದು. ಆತಂಕ ಪಡುವಂತ ವಾತಾವರಣ ಇನ್ನು ಸೃಷ್ಟಿಯಾಗಿಲ್ಲ. ಮುಂಜಾಗ್ರತೆಯಿಂದ ಇರಿ ಎಂದು ಸರ್ಕಾರದಿಂದ ಸೂಚನೆಯನ್ನು ನೀಡಲಾಗಿದೆ.