ಬೆಂಗಳೂರು: ಉದ್ಘಾಟನೆಯಾಗಿ ಮೂರೇ ವರ್ಷ. ಮಂಜುನಾಥ ನಗರದ ಫ್ಲೈ ಓವರ್ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಫ್ಲೈ ಓವರ್ ಅನ್ನ 23 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು.
ಈಗ ಈ ಫ್ಲೈ ಓವರ್ ಮೇಲೆ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಸಿಮೆಂಟ್ ವರ್ಜ್ ಮಾಡಿ ಫ್ಯಾಚಪ್ ಮಾಡಲಾಗಿದೆ. 2018 ರಲ್ಲಿ ಈ ಫ್ಲೈಓವರ್ ಉದ್ಘಾಟನೆ ಮಾಡಲಾಗಿತ್ತು. ಸೇತುವೆಯ ಸ್ಥಿತಿ ನೋಡಿದ್ರೆ ಕಳಪೆ ಕಾಮಗಾರಿ ಮಾಡಿದ್ದಾರೆಂಬುದು ಎದ್ದು ಕಾಣುತ್ತಿದೆ.
ಕೇವಲ ಹೀಗೆ ಮೂರೇ ವರ್ಷಕ್ಕೆ ಬಿರುಕು ಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಫ್ಲೈಓವರ್ ಮೇಲೆ ಓಡಾಡೋದಕ್ಕೂ ಜನ ಭಯ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಬಿರುಕು ಬಿಟ್ಟಿರುವ ಕಡೆ ಸೇತುವೆಯ ಸ್ಲಾಬ್ ಗಳು ಪಕ್ಕಕ್ಕೆ ಜರುಗಿವೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಳಪೆ ಕಾಮಗಾರಿಯುಂದಾಗಿ ಈ ರೀತಿಯಾಗಿದೆ ಎಂದು ಆರೋಪಿಸಿದ್ದಾರೆ.